ಕರ್ನಾಟಕ

karnataka

ETV Bharat / state

ನೀರು ಬಿಡುವ ವಿಚಾರದಲ್ಲಿ ಡಿಸಿಎಂ ಕಾರಜೋಳ, ಶಾಸಕ ಶಿವನಗೌಡ ನಡುವೆ ವಾಗ್ವಾದ - clashes between DCM Govind Karajola and MLA Shivanaguda Nayak in Vijayapur

ಆಲಮಟ್ಟಿ ಜಲಾಶಯದಿಂದ ರೈತರ ಹೊಲಗಳಿಗೆ ನೀರು ಹರಿಸುವ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಶಾಸಕ ಶಿವನಗೌಡ ನಾಯಕ್ ನಡುವೆ ವಾಗ್ವಾದ ನಡೆದಿದೆ.

ನೀರು ಬಿಡುವ ವಿಚಾರದಲ್ಲಿ ವಾಗ್ವಾದ

By

Published : Nov 18, 2019, 11:40 AM IST

ವಿಜಯಪುರ: ನೀರು ಬಿಡುವ ವಿಚಾರದಲ್ಲಿ ಶಾಸಕ ಶಿವನಗೌಡ ನಾಯಕ್​ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಧ್ಯೆ ವಾಗ್ವಾದ ನಡೆದಿದೆ.

ನೀರು ಬಿಡುವ ವಿಚಾರದಲ್ಲಿ ವಾಗ್ವಾದ

ಆಲಮಟ್ಟಿಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಆಲಮಟ್ಟಿಯಿಂದ ರೈತರ ಹೊಲಗಳಿಗೆ ನೀರು ಹರಿಸಲು ಕೆಲ ನಿರ್ಬಂಧನೆ ಹಾಕಿದ ಡಿಸಿಎಂ ವಿರುದ್ಧ ಶಾಸಕ ಶಿವನಗೌಡ ನಾಯಕ ಗರಂ ಆಗಿದ್ದಲ್ಲದೆ ಆವಾಜ್​ ಹಾಕಿದ್ದಾರೆ.

ಬಸವಸಾಗರದಿಂದ ನಾರಾಯಣಪುರ ಬಲದಂಡೆಗೆ ನೀರು ಹರಿಸಿ, ನಿಮ್ಮ ಕಥೆ ಕೇಳೋಕೆ ನಾವಿಲ್ಲಿ ಬಂದು ಕೂತಿಲ್ಲ. ಜಲಾಯಶದಿಂದ ಮಾರ್ಚ್​ 20ರಿಂದ 30ರವರೆಗೂ ನೀರು ಬಿಡಬೇಕು. ನೀರಿದ್ದೂ ಬಿಡಲಿಲ್ಲ ಅಂದ್ರೆ ರೈತರು ನಮ್ಮ ಮುಖದ ಮೇಲೆ ಹೊಡಿತಾರೆ. ಚೇರ್ಮನ್​​​ ಆಗಿ ನೀವು ಅಧಿಕಾರಿಗಳಿಗೆ ಹೇಳಿ ನೀರು ಬಿಡಿಸಬೇಕು ಎಂದು ಏರುಧ್ವನಿಯಲ್ಲಿ ಶಾಸಕ ಶಿವನಗೌಡ ನಾಯಕ, ಗೋವಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವಿನ ವಾಗ್ವಾದ ನೋಡುತ್ತಾ ಸಭೆಯಲ್ಲಿದ್ದ ಕೆಬಿಜೆಎನ್​ಎಲ್ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಾಗಿದ್ದರು.

For All Latest Updates

TAGGED:

ABOUT THE AUTHOR

...view details