ಕರ್ನಾಟಕ

karnataka

ETV Bharat / state

ವಿಜಯಪುರ: ರೋಗಿಯ ಸಂಬಂಧಿಕರು ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ - ಮಾತಿನ ಚಕಮಕಿ

ಇಂಡಿ ತಾಲೂಕು ಆಸ್ಪತ್ರೆ ವೈದ್ಯ ಡಾ. ಅಮೀತ ಕೋಳೆಕರ ಅವರೊಂದಿಗೆ ಕೋವಿಡ್ ರೋಗಿಯೊಬ್ಬರ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ.

Clash breaks out between doctor and relatives of patient
ರೋಗಿ ಸಂಬಂಧಿ ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ

By

Published : May 6, 2021, 11:11 AM IST

ವಿಜಯಪುರ: ತೀವ್ರ ಅನಾರೋಗ್ಯದಿಂದ ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತಿದ್ದ ರೋಗಿಯೊಬ್ಬ ಇನ್ನೇನು ಸಾಯುತ್ತಾನೆ ಎಂದು ವೈದ್ಯರು ಆತನ ಸಂಬಂಧಿಕರಿಗೆ ಪದೇ ಪದೆ ಹೇಳುತ್ತಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು, ವೈದ್ಯರ ಜತೆ ವಾಗ್ವಾದ ನಡೆಸಿದ ಘಟನೆ ಜಿಲ್ಲೆಯ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಇಂಡಿ ತಾಲೂಕು ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಕರು ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ

ಇಂಡಿ ತಾಲೂಕು ಆಸ್ಪತ್ರೆ ವೈದ್ಯ ಡಾ. ಅಮೀತ ಕೋಳೆಕರ ಅವರೊಂದಿಗೆ ಕೋವಿಡ್ ರೋಗಿಯೊಬ್ಬರ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಈ ಮಧ್ಯೆ ರೋಗಿ ಸಾವನ್ನಪ್ಪಿದ್ದಾನೆ. ಇದನ್ನು ರೋಗಿಯ ಸಂಬಂಧಿಕರು ಮೊಬೈಲ್​ನಲ್ಲಿ ವಿಡಿಯೋ ಸಹ ಮಾಡಿದ್ದಾರೆ. ನಿಮ್ಮ ಪೇಶೆಂಟ್​ ಸ್ಥಿತಿ ಸೀರಿಯಸ್ ಆಗಿದೆ. ಆತ ಬದುಕುವುದಿಲ್ಲ ಎಂದು ವೈದ್ಯರು ಪದೇ ಪದೆ ರೋಗಿ ಹಾಗೂ ಸಂಬಂಧಿಕರಿಗೆ ಹೇಳಿದ್ದಾರೆ. ವೈದ್ಯ ಡಾ. ಅಮೀತ ಕೋಳೆಕರ ಆಸ್ಪತ್ರೆಗೆ ಬರುವ ರೋಗಿಗಳಿಗೆ ಧೈರ್ಯ ತುಂಬುವ ಮಾತನಾಡುವುದನ್ನು ಬಿಟ್ಟು, ಧೈರ್ಯಗೆಡಿಸುತ್ತಿದ್ದಾರೆ. ಇಂಡಿ ತಾಲೂಕು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳು ಬಲಿಯಾಗುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.‌

ಕಳೆದ ಮೂರ್ನಾಲ್ಕು ದಿನಗಳಿಂದ ದಾಖಲಾಗಿದ್ರೂ ಇಂಡಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಕಳೆದ ರಾತ್ರಿ ರೋಗಿ ಸಾವನ್ನಪ್ಪಿದ್ದಾನೆ. ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ರೋಗಿಯ ಸಂಬಂಧಿಕರು ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ನಿನ್ನೆ ಇಂಡಿ ತಾಲೂಕಿನ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಗಂಟೆಗಟ್ಟಲೇ ಕೊವಿಡ್ ಕುರಿತು ಸಭೆ ಸಹ ನಡೆಸಿದ್ದರು. ಆದರೆ ಅವರು ಸಭೆ ನಡೆಸಿ ಹೋದ ಬೆನ್ನಲ್ಲೇ ವೈದ್ಯರು ಹಾಗೂ ರೋಗಿಯ ಸಂಬಂಧಿಕರ ಮಧ್ಯೆ ವಾಗ್ವಾದ ನಡೆದಿದೆ.

ಓದಿ:10% ಕಮಿಷನ್​ಗಾಗಿ ಬೆಡ್ ಬ್ಲಾಕಿಂಗ್ ದಂಧೆ: ಸಿಸಿಬಿ ಮುಂದೆ ಬಾಯ್ಬಿಟ್ಟ ವಂಚಕರು

ABOUT THE AUTHOR

...view details