ವಿಜಯಪುರ: ಭೀಮಾತೀರದ ಹಂತಕ ಭಾಗಪ್ಪ ಹರಿಜನ ತನ್ನ ಜನರ ಒಳಿತಿಗಾಗಿ ದೇವಸ್ಥಾನದಲ್ಲಿ ಚಂಡಿಕಾ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಆತನ ಬೆಂಬಲಿಗರು ಸ್ಪಷ್ಟಪಡಿಸಿದ್ದಾರೆ.
ಭಾಗಪ್ಪ ಹರಿಜನ ಮನೆ ದೇವರಾದ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಎಲ್ಲಮ್ಮನ ಬಬಲಾದದ ಎಲ್ಲಮ್ಮದೇವಿ ಗ್ರಾಮದೇವಿ ದೇಗುಲದಲ್ಲಿ ಭಾಗಪ್ಪ ಹರಿಜನ ನಡೆಸಿರುವ ಪೂಜೆ ಶತ್ರು ಸಂಹಾರದ ಪೂಜೆ ಅಲ್ಲ, ಜನರ ಒಳಿತಿಗಾಗಿ ಪೂಜೆ ಮಾಡಿದ್ದಾರೆ ಎಂದು ಅವರ ಬೆಂಬಲಿಗ ಪ್ರಭು ರತ್ನಾಕರ ಎಂಬುವರು ದೂರವಾಣಿ ಮೂಲಕ ಸ್ಪಷ್ಟ ಪಡಿಸಿದ್ದಾರೆ.