ವಿಜಯಪುರ/ಕೊಪ್ಪಳ,ಹುಬ್ಬಳ್ಳಿ/ಬಳ್ಳಾರಿ: ಕ್ರಿಸ್‌ಮಸ್ ಹಬ್ಬವನ್ನು ವಿಜಯಪುರ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ ಚರ್ಚ್ಗಳಿಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಗಾಂಧಿ ವೃತ್ತದ ಬಳಿಯ ಚರ್ಚ್‌ನಲ್ಲಿ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕ್ರಿಶ್ಚಿಯನ್ ಬಾಂಧವರು ಪರಸ್ಪರ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹುಬ್ಬಳ್ಳಿ:ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಏಸುಕ್ರಿಸ್ತನ ಜನ್ಮದಿನದ ನಿಮಿತ್ತವಾಗಿ ಕ್ರಿಸಮಸ್ ಹಬ್ಬವನ್ನು ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಮನೆಮಾಡಿತ್ತು.
ನಗರದ ಹಲವು ಚರ್ಚ್‌ಗಳಲ್ಲಿ ಝಗಝಮಿಸಿದ ಕ್ಯಾಂಡೆಲ್‌ಗಳ ನೋಟ ಕಣ್ಮನ ಸೆಳೆಯಿತು. ಕಾರವಾರ ರಸ್ತೆಯ ಬಾಷಲ್ ಮಿಶನ್ ಶಾಲೆ ಸಮೀಪದ ಮೈಯರ್ ಮೆಮೋರಿಯಲ್ ಚರ್ಚ್, ಕೇಶ್ವಾಪೂರದ ಸಂತ ಜೋಸೆಫರ ಕ್ಯಾಥೋಲಿಕ್ ಚರ್ಚ್, ಗಾಂಧಿವಾಡದ ಎಬಿಎಂ ತೆಲುಗು ಬ್ಯಾಪ್ಟಿಸ್ಟ್ ಚರ್ಚ್, ಉಣಕಲ್ ಚರ್ಚ್, ಶಾಂತಿ ಕಾಲೊನಿಯ ಬಾಲಯೇಸು ದೇವಾಲಯ, ಗದಗ ರಸ್ತೆಯ ಸೆಂಟ್ ಜಾನ್ಸ್ ಲುಥೇರನ್ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕೇಕ್ ವಿತರಿಸುವ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕ್ರೈಸ್ತ ಬಾಂಧವರು ಸಂಭ್ರಮಪಟ್ಟರು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.