ವಿಜಯಪುರ:ಶವ ಸಂಸ್ಕಾರಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಕ್ರೈಸ್ತ ನಾಯಕರ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶವ ಸಂಸ್ಕಾರಕ್ಕೆ ಜಾಗ ಮಂಜೂರು ಮಾಡುವಂತೆ ಡಿಸಿಗೆ ಕ್ರೈಸ್ತ ನಾಯಕರ ಮನವಿ - District Collector of Vijayapura
ಕ್ರೈಸ್ತ ಪ್ರಾರ್ಥನಾ ಮಂದಿರಗಳಿಗೆ ಸಂಬಂಧಿಸಿದ ಶವ ಸಂಸ್ಕಾರಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಕ್ರೈಸ್ತ ನಾಯಕರ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹಲವು ವರ್ಷಗಳಿಂದ ನಗರದಲ್ಲಿರುವ ಕ್ರೈಸ್ತ ಸಮುದಾಯದವರಿಗೆ ಶವ ಸಂಸ್ಕಾರಕ್ಕೆ, ಸಮಾಧಿಗೆ ಜಾಗವಿಲ್ಲದೆ ತೊಂದರೆಯಾಗುತ್ತಿದೆ. ಕ್ರೈಸ್ತ ಭಕ್ತರು ಅಥವಾ ಪ್ರಾರ್ಥನಾ ಮಂದಿರದ ಸದಸ್ಯರು ಮರಣ ಹೊಂದಿದರೆ ಶವ ಸಂಸ್ಕಾರ ಮಾಡಲು ಜಾಗದ ಕೊರತೆ ಇದ್ದು, ಕಳೆದ ಹಲವು ವರ್ಷಗಳಿಂದ ಜಾಗ ಮಂಜೂರು ಕುರಿತು ಮನವಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಕೆಲವು ಕ್ರೈಸ್ತ ಸ್ಮಶಾನ ಭೂಮಿಯಲ್ಲಿ ಅನುಯಾಯಿಗಳನ್ನು ಮಣ್ಣು ಮಾಡಲು ತಕರಾರು ಮಾಡಲಾಗುತ್ತಿದೆ ಎಂದು ನಾಯಕರ ಸಂಘದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಸಿದರು.
ಕಳೆದ ಹಲವು ವರ್ಷಗಳಿಂದ ಧರ್ಮ ಭಕ್ತರನ್ನು ಸಮಾಧಿ ಮಾಡಲು ಸ್ಥಳದ ಕೊರತೆಯಾಗುತ್ತಿದೆ. ಜಿಲ್ಲಾಡಳಿತ ಜಾಗ ಮಂಜೂರು ಮಾಡುವಂತೆ ಕ್ರೈಸ್ತ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.