ವಿಜಯಪುರ:ಬುಧವಾರ ಬೆಳಗಿನ ಜಾವ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯ ಕೆ.ಆರ್.ಹಳ್ಳಿ ಬಳಿ ಖಾಸಗಿ ಬಸ್ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿರುವ ಭೀಕರ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಚಿತ್ರದುರ್ಗ ಬಸ್ ದುರಂತ: ದಹನವಾದ ಮಹಿಳೆ-ಮಗುವಿನ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆ! - ಚಿತ್ರದಿರ್ಗದಲ್ಲಿ ಹೊತ್ತಿ ಉರಿಸಿ ಖಾಸಗಿ ಬಸ್
ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯ ಕೆ.ಆರ್.ಹಳ್ಳಿ ಬಳಿ ಖಾಸಗಿ ಬಸ್ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿರುವ ಭೀಕರ ದೃಶ್ಯ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಮಹಿಳೆ ಮತ್ತು ಮಗುವಿಗೆ ಬೆಂಕಿ ಹೊತ್ತಿಕೊಂಡಿರುವುದು ಅಸ್ಪಷ್ಟವಾಗಿ ಕಾಣುತ್ತಿದೆ.
ಮಹಿಳೆ, ಮಗುವಿಗೆ ಬೆಂಕಿ ಹೊತ್ತಿರುವ ಭೀಕರ ದೃಶ್ಯ
ಬಸ್ನಲ್ಲಿದ್ದ ಪ್ರಯಾಣಿಕರು, ಬೇರೆ ವಾಹನದವರು ಈ ವಿಡಿಯೋ ಮಾಡಿದ್ದು, ಬೆಂಕಿಯಲ್ಲಿ ಮಗು ಸುಟ್ಟು ಹೋಗುತ್ತಿರುವ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಘಟನೆಯಲ್ಲಿ ವಿಜಯಪುರದ ಗಣೇಶನಗರದ ಐವರು ಸುಟ್ಟು ಕರಗಲಾಗಿದ್ದರು. ಇವರಲ್ಲಿ ಮೂವರು ಮಕ್ಕಳಾದ ಸ್ಪರ್ಶಾ (8), ಸಮೃದ್ಧ (5), ನಿಶ್ವಿತಾ(3) ಇವರ ತಾಯಂದಿರಾದ ಶೀಲಾ ಹಾಗೂ ಕವಿತಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು.
ಸೀಟಿನಲ್ಲಿಯೇ ಮಗು ಸುಟ್ಟು ಹೋಗಿರುವ ದೃಶ್ಯದ ಜೊತೆಗೆ ಮಹಿಳೆಯೊಬ್ಬಬ್ಬರಿಗೆ ಬೆಂಕಿ ಹೊತ್ತಿರುವ ದೃಶ್ಯ ಅಸ್ಪಷ್ಟವಾಗಿ ಕಾಣುತ್ತಿದೆ.