ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮಗು ಕಳ್ಳತನಕ್ಕೆ ಯತ್ನಿಸಿದ ಕಿರಾತಕ.. ಕಳ್ಳನನ್ನು ಬೆನ್ನಟ್ಟಿ ಪುತ್ರನನ್ನು ರಕ್ಷಿಸಿದ ತಾಯಿ - Childs mother caught thief

ಮಗು ಕಳ್ಳತನ ಮಾಡಲು ಯತ್ನಿಸಿದ ಕಿರಾತಕ- ಖದೀಮನನ್ನು ಬೆನ್ನಟ್ಟಿ ಹಿಡಿದ ಗಟ್ಟಿಗಿತ್ತಿ- ಕರುಳ ಕುಡಿಯನ್ನು ರಕ್ಷಿಸಿದ ಮಹಾತಾಯಿ

Childs mother caught the thief who was stealing her 4 year old boy
Childs mother caught the thief who was stealing her 4 year old boy

By

Published : Jul 21, 2022, 1:15 PM IST

ವಿಜಯಪುರ:ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕನ ಕಳ್ಳತನಕ್ಕೆ ಯತ್ನಿಸಿದ ಘಟನೆ ಇಲ್ಲಿನ ಬಸವನಗರದಲ್ಲಿ ನಡೆದಿದೆ. ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿದ ಬಾಲಕನ ತಾಯಿ ರೇಣುಕಾ, ತನ್ನ ಮಗನನ್ನು ರಕ್ಷಿಸಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಜಮಾವಣೆಗೊಂಡ ಸ್ಥಳೀಯರು ಕಳ್ಳನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕೂಡಿದ ಜನರನ್ನು ನೋಡಿದ ಚಾಲಾಕಿ ಕಳ್ಳ ಮಾನಸಿಕ ಅಸ್ವಸ್ಥನಂತೆ ಡ್ರಾಮಾ ಮಾಡಿದ್ದಾನೆ. ಹೆಸರು ಕೇಳಿದರೆ ದಾದಾಪೀರ, ಕಾಸೀಮ್, ಸಲೀಮ್, ಮೈಬೂಬ್ ಎಂದೆಲ್ಲ ಹೆಸರು ಹೇಳಿ ಅರೆಹುಚ್ಚನಂತೆ ವರ್ತಿಸಿದ್ದಾನೆ. ಇದರಿಂದ ಮತ್ತಷ್ಟು ಅನುಮಾನ ಬಂದಿದ್ದರಿಂದ ಅಲ್ಲಿ ಸೇರಿದ್ದ ಜನ ಆತನನ್ನು ಆಳಿಗೊಂದರಂತೆ ಏಟುಹಾಕಿ ಬಾಯ್ಬಿಡಿಸಿದ್ದಾರೆ.

ಮಗು ಕಳ್ಳತನಕ್ಕೆ ಯತ್ನಿಸಿದ ಕಿರಾತಕನನ್ನು ಬೆನ್ನಟ್ಟಿ ಹಿಡಿದ ತಾಯಿ

ಅಂಗಡಿಗೆ ಬಂದಿದ್ದ ಸಂತೋಷ್ ಮತ್ತು ರೇಣುಕಾ ಎಂಬ ದಂಪತಿಯ ಮಗನನ್ನು ಯಾರಿಗೂ ಗೊತ್ತಾಗದಂತೆ ಕಳ್ಳತನ ಮಾಡಿ ಆರೋಪಿ ಪರಾರಿಯಾಗುತ್ತಿದ್ದ. ಬಾಲಕ ಅಳುವ ಧ್ವನಿ ಕೇಳಿದ ತಾಯಿ ರೇಣುಕಾ ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಆತನನ್ನು ಕಂಬಕ್ಕೆ ಕಟ್ಟಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಕಿಸ್ಸಿಂಗ್ ಪಂದ್ಯ.. ವಿಡಿಯೋ ವೈರಲ್ ಮಾಡಿದ ಯುವಕನ ವಿಚಾರಣೆ

ABOUT THE AUTHOR

...view details