ಮುದ್ದೇಬಿಹಾಳ (ವಿಜಯಪುರ): ಉತ್ತಮ ಮಳೆಯಾಗಲಿ ಎಂದು ಕೋರಿ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶೇಷ ಸಂಪ್ರದಾಯವೊಂದನ್ನು ಆಚರಿಸಿದ್ದಾರೆ. ಹೆಣ್ಣು ಮಕ್ಕಳನ್ನೇ ವಧು - ವರನ ವೇಷದಲ್ಲಿ ಶೃಂಗರಿಸಿ ಮದುವೆ ಮಾಡಿಸಿದ್ದಾರೆ. ವರುಣ ದೇವನ ಕೃಪೆಗಾಗಿ ಗ್ರಾಮೀಣ ಭಾಗದಲ್ಲಿ ನಡೆಯುವ ವಿಶೇಷ ಕಲ್ಯಾಣವಿದು.
ಕಾರಹುಣ್ಣಿಮೆ ಮರು ದಿನದಂದು ಸಸಿ ಹಬ್ಬ ಮಾಡುವ ಪದ್ಧತಿ ಇದೆ. ಆ ನಿಮಿತ್ತ ಹೆಣ್ಣು ಮಕ್ಕಳಿಬ್ಬರನ್ನು ವಧು ವರರನ್ನಾಗಿ ತಯಾರಿ ಮಾಡಿ ಅವರಿಗೆ ಮದುವೆ ಶಾಸ್ತ್ರ ಮಾಡುವ ರೂಢಿ ಇದೆ. ಮದುವೆ ಸಂಪ್ರದಾಯದಂತೆ ಅರಿಷಿಣ ಶಾಸ್ತ್ರ ಮಾಡಿ ಮಾಂಗಲ್ಯಧಾರಣೆ ಮಾಡಿಸಿದರು.