ವಿಜಯಪುರ: ಭಾರತೀಯ ರಿಸರ್ವ್ ಬೆಟಾಲಿಯನ್ನ ಮುಖ್ಯ ಕಾನ್ಸ್ಟೇಬಲ್ ಆಗಿ ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ ರೋಹಿದಾಸ್ ಕೊಡತೆ (38) ಅವರು ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ರಿಸರ್ವ್ ಬೆಟಾಲಿಯನ್ ಮುಖ್ಯ ಕಾನ್ಸ್ಟೇಬಲ್ ನಿಧನ.. ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ - Suresh Rohidas kodate passed away
ಭಾರತೀಯ ರಿಸರ್ವ್ ಬೆಟಾಲಿಯನ್ ಮುಖ್ಯ ಕಾನ್ಸ್ಟೇಬಲ್ ಆಗಿ ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ ರೋಹಿದಾಸ್ ಕೊಡತೆ ಅವರು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ನಿನ್ನೆ ಅಂತ್ಯಕ್ರಿಯೆ ನೇರವೇರಿಸಲಾಯಿತು.

ಭಾರತೀಯ ರಿಸರ್ವ್ ಬೆಟಾಲಿಯನ್ ಮುಖ್ಯ ಕಾನ್ಸ್ಟೇಬಲ್ ನಿಧನ
ಸಕಲ ಗೌರವಗಳೊಂದಿಗೆ ನೆರವೇರಿದ ಮುಖ್ಯ ಕಾನ್ಸ್ಟೇಬಲ್ ಅಂತ್ಯಕ್ರಿಯೆ
ಸುರೇಶ ಕೊಡತೆ ಅವರು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದವರಾಗಿದ್ದು, 2008 ರಿಂದ ಭಾರತೀಯ ರಿಸರ್ವ್ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ವಗ್ರಾಮ ಧೂಳಖೇಡದಲ್ಲಿ ಶುಕ್ರವಾರ ಐ.ಆರ್.ಬಿ ವಿಜಯಪುರ ಹಾಗೂ ಝಳಕಿ ಪೊಲೀಸ್ ಠಾಣೆ ವತಿಯಿಂದ ಅಗಲಿದ ಮುಖ್ಯಕಾನ್ಸ್ಟೇಬಲ್ಗೆ ಸಕಲ ಸರ್ಕಾರಿ ಗೌರವ ವಂದನೆ ಸಲ್ಲಿಸಿ, ವಿಧಿ-ವಿಧಾನಗಳೊಂದಿಗೆ ರುದ್ರುಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೇರವೇರಿಸಿದರು.
ಇದನ್ನೂ ಓದಿ:ವಾಹನ ತಪಾಸಣೆ ವೇಳೆ ಟಿಪ್ಪರ್ ಪಲ್ಟಿ: ಮರಳಿನಡಿ ಸಿಲುಕಿ ಹೆಡ್ ಕಾನ್ಸ್ಟೇಬಲ್ ಸಾವು