ಕರ್ನಾಟಕ

karnataka

By

Published : Aug 8, 2021, 3:40 PM IST

ETV Bharat / state

ಮಹಾರಾಷ್ಟ್ರದಿಂದ ಬರುವವರ ಮೇಲೆ ಕಣ್ಗಾವಲು : ಗಡಿ ಭಾಗದಲ್ಲಿ ತೀವ್ರ ತಪಾಸಣೆ

ತಿಕೋಟಾ ತಾಲೂಕಿನ‌ ಸಿದ್ದಾಪುರ ಗ್ರಾಮದ ಬಳಿಯ ಚೆಕ್​ಪೋಸ್ಟ್​ನಲ್ಲಿ ಓರ್ವ ಆರೋಗ್ಯ ಸಿಬ್ಬಂದಿ ಮಾತ್ರ‌ ಕರ್ತವ್ಯಕ್ಕೆ ಹಾಜರಾಗಿದ್ದರು. ಇತರೆ ಸಿಬ್ಬಂದಿ ಗೈರಾಗಿದ್ದರು. ಹೀಗಾಗಿ, ಮಹಾರಾಷ್ಟ್ರದಿಂದ ಗಡಿ ಪ್ರವೇಶ ಮಾಡುವವರಲ್ಲಿ ನೆಗೆಟಿವ್ ರಿಪೋರ್ಟ್​ ಇಲ್ಲದವರನ್ನು ವಾಪಸ್ ಕಳಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ..

check-post-monitors-people-moment-from-maharashtra
ಗಡಿ ಭಾಗದಲ್ಲಿ ತೀವ್ರ ತಪಾಸಣೆ

ವಿಜಯಪುರ :ರಾಜ್ಯದಲ್ಲಿ ಕೊರೊನಾ 3ನೇ ಅಲೆ ಭೀತಿ ಎದುರಾಗುತ್ತಿರುವ ವೇಳೆಯೇ ಗಡಿ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಾಡು ಮಾಡಲಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶಿಸುವವರನ್ನು ತಪಾಸಣೆ ಮಾಡಲಾಗುತ್ತಿದೆ.

ಗಡಿ ಭಾಗದಲ್ಲಿ ತೀವ್ರ ತಪಾಸಣೆ

ಜಿಲ್ಲೆಯ ಗಡಿ ಭಾಗದಲ್ಲಿ 11 ಚೆಕ್​ಪೋಸ್ಟ್​ ನಿರ್ಮಾಣ ಮಾಡಲಾಗಿದೆ. ಆದರೆ, ಚೆಕ್​ಪೋಸ್ಟ್​ಗಳಲ್ಲಿ ತಪಾಸಣಾ ಕಾರ್ಯಕ್ಕೆ ಆರೋಗ್ಯ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು ಗೈರಾಗಿದ್ದಾರೆ. ಹೀಗಾಗಿ, ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.

ತಿಕೋಟಾ ತಾಲೂಕಿನ‌ ಸಿದ್ದಾಪುರ ಗ್ರಾಮದ ಬಳಿಯ ಚೆಕ್​ಪೋಸ್ಟ್​ನಲ್ಲಿ ಓರ್ವ ಆರೋಗ್ಯ ಸಿಬ್ಬಂದಿ ಮಾತ್ರ‌ ಕರ್ತವ್ಯಕ್ಕೆ ಹಾಜರಾಗಿದ್ದರು. ಇತರೆ ಸಿಬ್ಬಂದಿ ಗೈರಾಗಿದ್ದರು. ಹೀಗಾಗಿ, ಮಹಾರಾಷ್ಟ್ರದಿಂದ ಗಡಿ ಪ್ರವೇಶ ಮಾಡುವವರಲ್ಲಿ ನೆಗೆಟಿವ್ ರಿಪೋರ್ಟ್​ ಇಲ್ಲದವರನ್ನು ವಾಪಸ್ ಕಳಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ನಿತ್ಯವೂ ಈ 11 ಚೆಕ್​ಪೋಸ್ಟ್ ಮೂಲಕ ಮಹಾರಾಷ್ಟ್ರದಿಂದ ಸಾವಿರಾರು ಜನ ಜಿಲ್ಲೆಗೆ ಬರುತ್ತಿದ್ದಾರೆ. ಪ್ರತಿಯೊಬ್ಬರನ್ನು ತಪಾಸಣೆ ಮಾಡಲು ಕೇವಲ ಪೊಲೀಸರು ಸಂಕಷ್ಟ ಅನುಭವಿಸುವಂತಾಗಿದೆ. ವಿವಿಧ ಇಲಾಖೆ ಸಿಬ್ಬಂದಿ ಅವರಿಗೆ ಸಾಥ್​ ನೀಡಿದ್ದರೆ, ಇನ್ನಷ್ಟು ಜಾಗೃತವಾಗಿ ಎಲ್ಲರನ್ನೂ ತಪಾಸಣೆ ಮಾಡಿ ಕಳುಹಿಸಲು ಅನುಕೂಲವಾಗಬಹುದು ಎಂದು ಸಿಬ್ಬಂದಿಯೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಓದಿ:ಮಕ್ಕಳಿಗಾಗಿ ಪ್ರತಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್​ ಆರಂಭ : ಸಚಿವೆ ಶಶಿಕಲಾ ಜೊಲ್ಲೆ

ABOUT THE AUTHOR

...view details