ಮುದ್ದೇಬಿಹಾಳ (ವಿಜಯಪುರ):ತಾಲೂಕಿನ ಬಿದರಕುಂದಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ 6 ಚೆಕ್ ಡ್ಯಾಂಗಳು ಒಂದೇ ಮಳೆಗೆ ತುಂಬಿವೆ.
ಒಂದೇ ಮಳೆಗೆ ತುಂಬಿದ ಚೆಕ್ ಡ್ಯಾಂಗಳು..ರೈತರ ಮೊಗದಲ್ಲಿ ಸಂತಸ ತಾಲೂಕಿನ ಢವಳಗಿ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಂನಲ್ಲಿ ಅಂದಾಜು 100 ಮೀಟರ್ನಷ್ಟು ನೀರು ಸಂಗ್ರಹವಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಿದರಕುoದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 6 ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಇದೀಗ ಒಂದೇ ಮಳೆಗೆ ಡ್ಯಾಂಗಳು ತುಂಬಿದ್ದು, ರೈತರು ಸಂತಸಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿದರಕುoದಿಯ ರೈತ ಶ್ರೀಶೈಲ ಹಿರೇಮಠ, ಚೆಕ್‌ಡ್ಯಾಂ ಕಟ್ಟಿದ್ದರಿಂದ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಡ್ಯಾಂ ನೀರನ್ನ ಬೆಳೆಗಳಿಗೆ ಕೀಟನಾಶಕಗಳನ್ನ ಸಿಂಪಡಿಸಲು ಬಳಸುತ್ತೇವೆ ಎಂದರು.
ಪಿಡಿಓ ಆನಂದ ಹಿರೇಮಠ ಮಾತನಾಡಿ, ರೈತರ ಜಮೀನಿನ ಸುತ್ತಮುತ್ತ ಬರುವ ಬೋರ್‌ವೆಲ್‌ಗಳು, ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಪಂಚಾಯತಿ ವ್ಯಾಪ್ತಿಯಲ್ಲಿ 6 ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಎಲ್ಲವೂ ಮಳೆ ನೀರಿನಿಂದ ತುಂಬಿ ತುಳುಕುತ್ತಿವೆ ಎಂದು ಹೇಳಿದರು.