ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಮೇಲೆ ಸಿಎಂ ಆರೋಪ ದುರುದ್ದೇಶಪೂರ್ವಕವಾಗಿದೆ: ಕವಟಗಿ - ಸಿಎಂ ಆರೋಪ

ಸಿಎಂ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದದ್ದು. ನಮ್ಮ ರಾಜ್ಯಾಧ್ಯಕ್ಷರು ಯಾವುದೇ ರೀತಿಯಿಂದ ಈ ರೀತಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಸಿಎಂ ಕುಮಾರಸ್ವಾಮಿಯವರ ಹತಾಶರಾಗಿ ಸರ್ಕಾರ ಇರುತ್ತೊ, ಹೋಗುತ್ತೋ ಎಂಬ ಭಯದಿಂದ ಸುಳ್ಳು ಆರೋಪ ಮಾಡಿದ್ದಾರೆ.

ಕವಟಗಿ

By

Published : Feb 8, 2019, 7:03 PM IST

ವಿಜಯಪುರ: ಯಾದಗಿರಿ ಶಾಸಕ ನಾಗನಗೌಡರಿಗೆ ಅವರ ಮಗ ಶರಣಗೌಡ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಮಿಷ ಒಡ್ಡಿ ಬಿಜೆಪಿಗೆ ಆಹ್ವಾನಿಸಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿರುವುದು ದುರುದ್ದೇಶಪೂರ್ವಕವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಆರೋಪಿಸಿದರು.

'ಈ ಟಿವಿ ಭಾರತ' ಜತೆ ಮಾತನಾಡಿದ ಅವರು, ಸಿಎಂ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಆರೋಪ ಸತ್ಯ

ಚಂದ್ರಶೇಖರ ಕವಟಗಿ
ಕ್ಕೆ ದೂರವಾದದ್ದು. ನಮ್ಮ ರಾಜ್ಯಾಧ್ಯಕ್ಷರು ಯಾವುದೇ ರೀತಿಯಿಂದ ಈ ರೀತಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಸಿಎಂ ಕುಮಾರಸ್ವಾಮಿಯವರ ಹತಾಶರಾಗಿ ಸರ್ಕಾರ ಇರುತ್ತೊ, ಹೋಗುತ್ತೋ ಎಂಬ ಭಯದಿಂದ ಪ್ರತಿಪಕ್ಷದವರ ಮೇಲೆ ಗೂಬೆ ಕೂರಿಸುವಂತ ದೃಷ್ಟಿಯಿಂದ ಸುಳ್ಳು ಆರೋಪ ಮಾಡಿದ್ದಾರೆ ಎಂದರು.

ಯಡಿಯೂರಪ್ಪ ಅವರು, ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಸಿಎಂ ನಕಲಿ ಆಡಿಯೋ ಟೇಪ್ ಮಾಡಿಸಿದ್ದಾರೆ ಕವಟಗಿ ಆರೋಪಿಸಿದರು.

ABOUT THE AUTHOR

...view details