ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಸರಗಳ್ಳರ ಹಾವಳಿ: ಅಮಾನುಷ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಸಿಸಿಟಿವಿ

ವೀರೇಶ ನಗರದಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ. ಘಟನೆಯಲ್ಲಿ ಮಹಿಳೆ 50 ಗ್ರಾಂ ಚಿನ್ನದ ಸರ ಹಾಗೂ 50 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.

ಸರಗಳ್ಳತನ

By

Published : May 7, 2019, 9:39 AM IST

Updated : May 7, 2019, 11:19 AM IST

ವಿಜಯಪುರ:ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚುತ್ತಿದ್ದು, ನಿಡಗುಂದಿ ಪಟ್ಟಣದಲ್ಲಿ ಇಬ್ಬರು ಬೈಕ್ ಸವಾರರು ಮಹಿಳೆಯೊಬ್ಬರ ಸರ ಕಿತ್ತು ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಟ್ಟಣದ ವೀರೇಶ ನಗರದಲ್ಲಿಅನ್ನಪೂರ್ಣ ಮಂದ್ರೂಪಕರ್ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಮಹಿಳೆ ಕತ್ತಿಗೆ ಕೈ ಹಾಕಿ ಆಕೆಯನ್ನು ಧರಧರನೆ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಅವರಲ್ಲಿದ್ದ 50 ಗ್ರಾಂ ಚಿನ್ನದ ಸರ ಹಾಗೂ 50 ಸಾವಿರ ನಗದು ಕಿತ್ತುಕೊಂಡಿದ್ದಾರೆ.

ಸರಗಳ್ಳತನದ ಸಿಸಿಟಿವಿ ದೃಶ್ಯ

ಘಟನೆ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳರ ಬೆನ್ನುಹತ್ತಿ ಮುದ್ದೇಬಿಹಾಳದಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತ ಆರೋಪಿಯನ್ನು ವಿಜಯಕುಮಾರ ಬಿರಾದಾರ ಎಂದು ಗುರುತಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಯುತ್ತಿದೆ.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿ
Last Updated : May 7, 2019, 11:19 AM IST

ABOUT THE AUTHOR

...view details