ವಿಜಯಪುರ:ವರ್ಗಾವಣೆಯಾಗಿ ಬಂದ ಪಿಎಸ್ಐ ಅವರನ್ನು ಅದ್ಧೂರಿಯಾಗಿ ಗ್ರಾಮಸ್ಥರು ಸ್ವಾಗತಿಸಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.
ಪಾದಯಾತ್ರೆ ಮೂಲಕ ಯಲಿಗಾರರಿಗೆ ಸ್ವಾಗತ ಕೋರಿದ ಚಡಚಣ ಗ್ರಾಮಸ್ಥರು ಹೌದು ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ಪೊಲೀಸ್ ಠಾಣೆ ಕುಖ್ಯಾತಿ ಪಡೆದಿದ್ದು, ಈಗ ಪಿಎಸ್ಐ ನೇಮಕ ಸಹ ಭಾರಿ ಸದ್ದು ಮಾಡಿದೆ. ಇನ್ನೂ ವರ್ಗಾವಣೆಯಾಗಿ ಬಂದ ಪಿಎಸ್ಐಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತ ಕೋರಿದ್ದು, ವಿವಾದಕ್ಕೆ ಕಾರಣವಾಗಿದೆ.
ಚಡಚಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಪಿಎಸ್ಐ ಮಹಾದೇವ ಯಲಿಗಾರ ಅವರು, ಈ ಮುಂಚೆ ಇದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಠಾಣೆಗೆ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಪಾದಯಾತ್ರೆ ಮೂಲಕ ಯಲಿಗಾರರನ್ನು ಮೆರವಣಿಗೆ ಮಾಡಿದ ಗ್ರಾಮಸ್ಥರ ನಡೆ ಸಹ ಬುದ್ದಿಜೀವಿಗಳಲ್ಲಿ ಬೇಸರ ತಂದಿದೆ.
ಮೆರವಣಿಗೆ ಮೂಲಕ ಯಲಗಾರ ಅವರನ್ನು ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆಯವರೆಗೆ ಕರೆದೊಯ್ಯಲಾಯಿತು. ಶಾಲು, ಹಾರ ಹಾಕಿದ ಯುವಕರು ಪಿಎಸ್ಐಗೆ ಯಲಗಾರರಿಗೆ ಆರತಿ ಎತ್ತಿ ತಿಲಕ ಹಚ್ಚಿದರು. ಒಟ್ಟಾರೆ ಹೇಳ್ಬೇಕು ಅಂದ್ರೆ ಫಿಲ್ಮೀ ಸ್ಟೈಲ್ ನಲ್ಲಿ ಮಹಾದೇವ ಯಲಗಾರರಿಗೆ ಅದ್ದೂರಿ ಸ್ವಾಗತ ಕೂರಿದ್ದು ಚರ್ಚೆಗೆ ಗ್ರಾಸವಾಗಿದೆ.