ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ ಪಟ್ಟಣದಲ್ಲಿ ಗಾಂಧೀಜಿ -ಶಾಸ್ತ್ರಿ ಜನ್ಮದಿನಾಚರಣೆ - ಲಾಲ್ ಬಹಾದುರ್ ಶಾಸ್ತ್ರಿ ಜನ್ಮದಿನಾಚರಣೆ

ಮುದ್ದೇಬಿಹಾಳ ಪಟ್ಟಣದ ವಿವಿಧೆಡೆ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

Gandhi Shastri ji birthday celebrating
ಗಾಂಧೀಜಿ- ಶಾಸ್ತ್ರೀಜೀ ಜನ್ಮದಿನಾಚರಣೆ

By

Published : Oct 2, 2020, 9:04 PM IST

ಮುದ್ದೇಬಿಹಾಳ: ಮಹಾತ್ಮಾ ಗಾಂಧೀಜಿ ಜನ್ಮದಿನಾಚರಣೆ ನಿಮಿತ್ತ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕವಡಿಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಶುಚಿಗೊಳಿಸಿದ್ದಾರೆ.

ಕಾರ್ಯಕರ್ತರು ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಳು, ಮುಳ್ಳುಕಂಟಿಗಳನ್ನು ಕಿತ್ತೆಸೆದು ಸ್ವಚ್ಛತಾ ಕಾರ್ಯಕ್ಕೆ ಶ್ರಮದಾನ ಮಾಡಿದ್ದಾರೆ. ಇದೇ ವೇಳೆ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸರಸ್ವತಿ ಪೀರಾಪೂರ, ನಿರ್ಮಲಾ ಪುರಾಣಿಕಮಠ, ನಿರ್ಮಲಾ ಗುಬಚಿ, ಶಾಸಕ ಆಪ್ತ ಸಹಾಯಕ ಬಸನಗೌಡ ಪಾಟೀಲ್ ಮುಂತಾದವರು ಇದ್ದರು.

ಗಾಂಧೀಜಿ- ಶಾಸ್ತ್ರೀ ಜನ್ಮದಿನಾಚರಣೆ

ಶಾಸಕ ನಡಹಳ್ಳಿಯವರ ಮಾತೋಶ್ರಿಯಿಂದ ಗಾಂಧೀಜಿ - ಶಾಸ್ತ್ರಿಗೆ ನಮನ : ಪಟ್ಟಣದ ಶಾಸಕರ ನಿವಾಸದಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿಜಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮಾತೋಶ್ರೀ ಗಂಗಾಬಾಯಿ ಸಂಗನಗೌಡ ಪಾಟೀಲ್ ನಡಹಳ್ಳಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ನಮಿಸಿದರು. ಇದೇ ವೇಳೆ ಪಕ್ಷದ ಕಾರ್ಯಕರ್ತರು ಇದ್ದರು.

ಜೆಡಿಎಸ್‌ನಿಂದ ಗಾಂಧೀಜಿ-ಶಾಸ್ರ್ತಿಜಯಂತಿ: ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಗಾಂಧೀಜಿ-ಶಾಸ್ರ್ತಿಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಪಕ್ಷದ ರಾಜ್ಯ ಮಹಿಳಾ ಮೋರ್ಚಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.

ABOUT THE AUTHOR

...view details