ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​​​ ಈಗ ಸಿದ್ದರಾಮಯ್ಯ ಪಕ್ಷವಾಗಿ ಮಾರ್ಪಟ್ಟಿದೆ: ಸಚಿವ ಸಿ.ಸಿ.ಪಾಟೀಲ್​​ ತಿರುಗೇಟು

ಉಪ ಚುನಾಚಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಸಿ.ಪಾಟೀಲ್​, ಸಿದ್ದರಾಮಯ್ಯ ರಾಜಕಾರಣಿಯಷ್ಟೇ. ಸರ್ಕಾರವಿರುತ್ತದೆ, ಬೀಳುತ್ತದೆ ಎಂದು ಹೇಳಲು ಜ್ಯೋತಿಷಿ ಅಲ್ಲ ಎಂದರು.

ಸಚಿವ ಸಿ.ಸಿ ಪಾಟೀಲ್ ತಿರುಗೇಟು

By

Published : Nov 13, 2019, 1:25 PM IST

ವಿಜಯಪುರ: ಉಪ ಚುನಾಚಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಸಿ.ಪಾಟೀಲ್​, ಸಿದ್ದರಾಮಯ್ಯ ರಾಜಕಾರಣಿಯಷ್ಟೇ. ಸರ್ಕಾರವಿರುತ್ತದೆ, ಬೀಳುತ್ತದೆ ಎಂದು ಹೇಳಲು ಜ್ಯೋತಿಷಿ ಅಲ್ಲ ಎಂದರು.

ಸಚಿವ ಸಿ.ಸಿ.ಪಾಟೀಲ್ ತಿರುಗೇಟು

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ‌ ಸರ್ಕಾರ ಮೂರೂವರೆ ವರ್ಷ ಆಡಳಿತ ನಡೆಸುತ್ತದೆ. ಭೀಕರ ಪ್ರವಾಹವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅತ್ಯಂತ ಯಶಸ್ವಿಯಾಗಿ‌ ನಿರ್ವಹಿಸಿದ್ದಾರೆ. ಪ್ರವಾಹ ನಿರ್ವಹಿಸಿದ ರೀತಿಯಿಂದ ಕಾಂಗ್ರೆಸ್ಸಿಗರು‌ ವಿಚಲಿತರಾಗಿದ್ದಾರೆ. ಇಂತಹ ದೂಡ್ಡ ಪ್ರವಾಹ ಬಂದರೂ ಎಲ್ಲರಿಗೂ ಪರಿಹಾರ ಮುಟ್ಟಿದೆ. ಸಂತ್ರಸ್ತರಿಗೆ ಮನೆ‌ ನಿರ್ಮಿಸಿಕೊಳ್ಳಲು‌ 5 ಲಕ್ಷ ರೂ. ನಮ್ಮ ಸರ್ಕಾರ ನೀಡಿದೆ. ಇದುವರೆಗೂ ಯಾವ ರಾಜ್ಯದಲ್ಲೂ ಈ ಮಟ್ಟದ‌ ಪರಿಹಾರ ನೀಡಿಲ್ಲ. ಅದನ್ನು ನೋಡಿ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಸಿದ್ದರಾಮಯ್ಯ ನಮ್ಮ ಸರ್ಕಾರಕ್ಕೆ ಶಹಬ್ಬಾಷ್​ ಗಿರಿ‌ ಕೊಡ್ತಾರೆ ಅನ್ನೋ‌ ನೀರಿಕ್ಷೆಯಲ್ಲಿ ನಾವೇನು ಇಲ್ಲ. ಪ್ರತಿಪಕ್ಷದ ನಾಯಕರಾಗಿ ಅವರ ಕೆಲಸ ಅವರು‌ ಮಾಡ್ತಾರೆ. ಆಪರೇಷನ್‌‌ ಹಸ್ತ ಅವರು ಮಾಡ್ತಿದ್ದಾರೆ‌‌. ಅವರ ಬಗ್ಗೆ ಕಾಂಗ್ರೆಸ್‌ನಲ್ಲಿ ಏನು ಅಭಿಪ್ರಾಯವಿದೆ ಎಂದು ಅವರಿಗೆ ಅರ್ಥವಾಗಲಿ ಎಂದು ಸಚಿವ ಸಿ.ಸಿ.ಪಾಟೀಲ್​ ಕಿಡಿಕಾರಿದರು.

ಬಿಜೆಪಿಯದ್ದು ಅನೈತಿಕ‌ ಸರ್ಕಾರ ಎಂಬ ಸಿದ್ದರಾಮಯ್ಯ ‌ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಸಿ.ಪಾಟೀಲ್​, ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಎಲ್ಲರ ಬಗ್ಗೆ ಗೌರವದಿಂದ ಮಾತನಾಡಬೇಕು. ಏಕವಚನದಲ್ಲಿ ಪ್ರತಿಪಕ್ಷದವರನ್ನು ಸಂಬೋಧಿಸುವುದನ್ನು ಬಿಡಬೇಕು. ಕಾಂಗ್ರೆಸ್ ಪಕ್ಷ ಇದೀಗ ಎರಡು ಹೋಳಾಗಿದೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯರ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಟಾಂಗ್​ ನೀಡಿದರು.

ಅರ್ನಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಸಿ.ಪಾಟೀಲ್​, ಅನರ್ಹರ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದರು.

For All Latest Updates

TAGGED:

ABOUT THE AUTHOR

...view details