ಕರ್ನಾಟಕ

karnataka

ETV Bharat / state

ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಶಾಸಕ ಯತ್ನಾಳ್.. - ಲೋಕೋಪಯೋಗಿ ಇಲಾಖೆ

ನಗರದ ಶಿಕಾರಿಖಾನೆ‌ಯ ಡಾ‌‌. ಚೌಧರಿ ಆಸ್ಪತ್ರೆಯಿಂದ‌ ಹರಣಶಿಕಾರಿ ಗಲ್ಲಿ ಬಾಂಗಿ ಆಸ್ಪತ್ರೆವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಇದಾಗಿದೆ.

yatnal
ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಬಸನಗೌಡ ಪಾಟೀಲ್​ ಯತ್ನಾಳ್

By

Published : Feb 11, 2020, 10:25 PM IST

ವಿಜಯಪುರ :ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಂಡ 1.45 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್‌ ನೆರವೇರಿಸಿದರು.

ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್..

ನಗರದ ಶಿಕಾರಿಖಾನೆ‌ಯ ಡಾ‌‌. ಚೌಧರಿ ಆಸ್ಪತ್ರೆಯಿಂದ‌ ಹರಣಶಿಕಾರಿ ಗಲ್ಲಿ ಬಾಂಗಿ ಆಸ್ಪತ್ರೆವರೆಗೆ ಸಿಸಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಇದಾಗಿದೆ.

ಇನ್ನೂ ಸ್ಟೇಷನ್ ರಸ್ತೆಯಲ್ಲಿರುವ ಕೊಂಚಿಕೊರವರ ಸಮುದಾಯದ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಬಳಿಕ ಮಾಡಬೇಕಾದ ಕಾಮಗಾರಿಗಳ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿದರು. ಕಾಮಗಾರಿ ಹಾಗೂ ಭವನ ಅಭಿವೃದ್ಧಿ ಪಡಿಸಿ ಮೂಲಸೌಕರ್ಯಗಳನ್ನ ಕಲ್ಪಿಸಲಾಗುವುದು ಎಂದು ಶಾಸಕ‌ರು ಜನರಿಗೆ ಭರವಸೆ ನೀಡಿದರು.

ABOUT THE AUTHOR

...view details