ಕರ್ನಾಟಕ

karnataka

ETV Bharat / state

ನಕಲಿ ದಾಖಲೆ ಸೃಷ್ಟಿಸಿದ ಆರೋಪ: ಇಂಡಿ ಶಾಸಕರ ವಿರುದ್ಧ ಎಫ್​ಐಆರ್​ - case registered against indi mla on creation of fake documents

ನಕಲಿ‌ ದಾಖಲೆ ಸೃಷ್ಟಿಸಿದ ಆರೋಪದಡಿ ಇಂಡಿ ಶಾಸಕ ಕಾಂಗ್ರೆಸ್​ನ ಯಶವಂತರಾಯಗೌಡ ಪಾಟೀಲ್​ ಹಾಗೂ ಅವರ ಬೆಂಬಲಿಗರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

indi
indi

By

Published : Dec 27, 2019, 11:04 AM IST

ವಿಜಯಪುರ:ನಕಲಿ‌ ದಾಖಲೆ ಸೃಷ್ಟಿಸಿದ ಆರೋಪದಡಿ ಇಂಡಿ ಶಾಸಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇಂಡಿ ಶಾಸಕ ಕಾಂಗ್ರೆಸ್​ನ ಯಶವಂತರಾಯಗೌಡ ಪಾಟೀಲ್​ ಹಾಗೂ ಅವರ ಬೆಂಬಲಿಗರಾದ ಎಂ‌ ಆರ್ ಪಾಟೀಲ್ ಹಾಗೂ ಜೆಟ್ಟೆಪ್ಪ ರವಳಿ ವಿರುದ್ಧ ದೂರು ದಾಖಲಾಗಿದೆ.

ಇಂಡಿಯ ಸಂಕೇತ ಬಗಲಿ ಎಂಬುವರು ನೀಡಿದ್ದ ದೂರು ಆಧರಿಸಿ ಈ ಎಫ್​ಐಆರ್​ ದಾಖಲಾಗಿದೆ. ಸಂಕೇತ ಬಗಲಿ ಇಂಡಿ‌ ಮಾಜಿ‌ ಶಾಸಕ ಬಿಜೆಪಿಯ ಡಾ. ಸಾರ್ವಭೌಮ‌ ಬಗಲಿ ಅವರ ಪುತ್ರರಾಗಿದ್ದಾರೆ. ಹತ್ತು ತಿಂಗಳ‌ ಹಿಂದೆ ನಡೆದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ವೇಳೆ ಅವಿರೋಧ ಆಯ್ಕೆ ಮಾಡುವಲ್ಲಿ ಅಕ್ರಮ ದಾಖಲೆ ಸೃಷ್ಟಿಸಿರುವ ಆರೋಪವನ್ನು ಶಾಸಕ ಯಶವಂತರಾಯಗೌಡ ಪಾಟೀಲ್​ ಎದುರಿಸುತ್ತಿದ್ದಾರೆ.

ದೂರಿನ ಪ್ರತಿ

2019 ಫೆಬ್ರುವರಿ 24 ಕ್ಕೆ ಚುನಾವಣೆ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಕೆ ಕೊನೆಯ‌ ದಿನವೇ ಫೆಬ್ರುವರಿ 18 ರಂದು ಅವಿರೋಧ ಆಯ್ಕೆ ಘೋಷಿಸಬೇಕಿತ್ತು. ಅದರ ಬದಲಾಗಿ ಫೆಬ್ರುವರಿ 19ರಂದು ಅವಿರೋಧ ಆಯ್ಕೆ ಘೋಷಣೆ ಆಗಿತ್ತು. ಎದುರಾಳಿ ಗುಂಪಿನ ಸಂಕೇತ ಬಗಲಿ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ವಾಪಸ್ ತೆಗೆಯದೆ ಇದ್ದರೂ ಸಹ ಅವರ ಸೂಚಕ ಡಾ. ಸಂತೋಷ ಬಗಲಿ ಹೆಸರಲ್ಲಿ ಫೋರ್ಜರಿ ಸಹಿ‌ ಮಾಡಿ ನಾಮಪತ್ರ ವಾಪಸ್ ಮಾಡಿದ್ದ ಆರೋಪ ಹಾಗೂ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದರು ಎಂದು ದೂರಲಾಗಿದೆ. ನಾಮಪತ್ರ ವಾಪಸ್ ಪಡೆಯದ ಕಾರಣ ಸೂಚಕರ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಸಂಕೇತ ಬಗಲಿ ದೂರಿನಲ್ಲಿ ಆರೋಪಿಸಿದ್ದಾರೆ. ಈ‌ ಕುರಿತು ಇಂಡಿ ಪೊಲೀಸ್ ಠಾಣೆಯಲ್ಲಿ ಎಫೈಆರ್​ ದಾಖಲಾಗಿದೆ.

ABOUT THE AUTHOR

...view details