ವಿಜಯಪುರ:ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಸ್ತೆ ಬದಿಯ ಹೋಟೆಲ್ಗಳಿಗೆ ನುಗ್ಗಿಸಿದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ. ಸುಮಾರು 5ಕ್ಕೂ ಅಧಿಕ ಹೋಟೆಲ್ಗಳ ಪೀಠೋಪಕರಣಗಳಿಗೆ ಸಂಪೂರ್ಣ ಹಾನಿಯಾಗಿದೆ. ಹೊರಗಡೆ ನಿಲ್ಲಿಸಿದ್ದ ಬೈಕ್ಗಳು ಜಖಂಗೊಂಡಿವೆ. ಹೋಟೆಲ್ನಲ್ಲಿ ಮಲಗಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರ: ಕುಡಿದ ಮತ್ತಿನಲ್ಲಿ ರಸ್ತೆ ಬದಿ ಹೋಟೆಲ್ಗಳಿಗೆ ಕಾರು ನುಗ್ಗಿಸಿದ ಚಾಲಕ - ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ
ಮದ್ಯ ಸೇವಿಸಿದ ಅಮಲಿನಲ್ಲಿ ರಸ್ತೆ ಬದಿಯ ಹೋಟೆಲ್ಗಳಿಗೆ ಕಾರು ನುಗ್ಗಿಸಿದ ಚಾಲಕ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಘಟನೆ.
ರಸ್ತೆ ಬದಿಯ ಹೋಟೆಲ್ಗಳಿಗೆ ಕಾರು ನುಗ್ಗಿಸಿದ ಚಾಲಕ
ವಿಜಯಪುರ ನಗರದ ವಿಠ್ಠಲ ಗೂಗ್ಯಾಳ್ ಎಂಬವರಿಗೆ ಸೇರಿದ KA28 M 9169 ನೋಂದಣಿ ಸಂಖ್ಯೆಯ ಮಹೀಂದ್ರಾ ಕಾರು ಇದಾಗಿದೆ. ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಬಲೇಶ್ವರ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಪಾದಚಾರಿಗೆ ಡಿಕ್ಕಿ: ಚಾಲಕನ ಬಂಧನ
Last Updated : Nov 22, 2022, 9:53 AM IST