ಕರ್ನಾಟಕ

karnataka

ETV Bharat / state

ವರಿಷ್ಠರ ಅನುಮತಿ ದೊರೆತ ತಕ್ಷಣವೇ ಸಂಪುಟ ವಿಸ್ತರಣೆ: ಡಿಸಿಎಂ ಕಾರಜೋಳ - ಸಿಎಂ ಬದಲಾವಣೆ ಇಲ್ಲ ಇಲ್ಲ ಎಂದ ಕಾರಜೋಳ

ಹೈಕಮಾಂಡ್ ಅನುಮತಿ ದೊರೆತ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಅಲ್ಲದೇ, ಸರ್ಕಾರ ರಚಿಸಲು ಸಹಕರಿಸಿದವರಿಗೂ ಸಚಿವ ಸ್ಥಾನ ದೊರೆಯಲಿದೆ ಅನ್ನೋ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

permission
ಡಿಸಿಎಂ ಕಾರಜೋಳ

By

Published : Nov 30, 2020, 1:16 PM IST

Updated : Nov 30, 2020, 2:04 PM IST

ವಿಜಯಪುರ:ಸಂಪುಟ ವಿಸ್ತರಣೆಗೆ ರಾಷ್ಟ್ರೀಯ ನಾಯಕರ ಅನುಮತಿಗಾಗಿ ಕಾಯಲಾಗುತ್ತದೆ. ಅವರ ಅನುಮತಿ ದೊರೆತ ನಂತರ ಖಂಡಿತವಾಗಿ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ವರಿಷ್ಠರ ಅನುಮತಿ ದೊರೆತ ಕೂಡಲೇ ಸಂಪುಟ ವಿಸ್ತರಣೆ: ಡಿಸಿಎಂ

ವಿಜಯಪುರದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ಸಿಎಂ ಹೋದಾಗ ಅವರ ಜೊತೆ ನಾನು ತೆರಳಿದ್ದೆ. ಕೇವಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದೆವು. ಬೇರೆಯವರನ್ನು ಭೇಟಿ ಮಾಡುವ ಕಾರ್ಯಕ್ರಮ ಇರಲಿಲ್ಲ ಎನ್ನುವ ಮೂಲಕ ಸಿಎಂಗೆ ಕೇಂದ್ರ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ ಎನ್ನುವ ಆರೋಪ ತಳ್ಳಿ ಹಾಕಿದರು.

ಅನುಮತಿ ದೊರೆತ ಕೂಡಲೇ ಸಂಪುಟ ವಿಸ್ತರಣೆ

ಸದ್ಯ ರಾಷ್ಟ್ರೀಯ ಅಧ್ಯಕ್ಷರು ಪ್ರವಾಸದಲ್ಲಿ ಇದ್ದಾರೆ. ಅವರ ಪ್ರವಾಸದ ನಂತರ ಅನುಮತಿ ದೊರೆಯುತ್ತದೆ. ಸರ್ಕಾರ ರಚನೆಗೆ ಸಹರಿಸಿದವರಿಗೆ ಸಚಿವ ಸ್ಥಾನ ದೊರೆಯಬೇಕು ಅದರಲ್ಲಿ ಯಾವುದೇ ಅನುಮಾನವಿಲ್ಲ. ಶೀಘ್ರ ಅವರಿಗೂ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಮೂಲಕ ಮೂಲ - ವಲಸಿಗರ ನಡುವಿನ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಸಿಎಂ ಬದಲಾವಣೆ ಇಲ್ಲ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ಲಿಂಗಾಯತರಿಗೆ ಒಬಿಸಿ

ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ವಿಚಾರದ ಪ್ರಸ್ತಾಪ ಸಂಪುಟ ಸಭೆಯಲ್ಲಿ ಬಂದಿಲ್ಲ ಕಾನೂನು ಚೌಕಟ್ಟಿನಲ್ಲಿ ಒಬಿಸಿ ನೀಡುವ ಕುರಿತು ಅಧ್ಯಯನ ನಡೆಸಲಾಗುವುದು. ಒಕ್ಕೂಟ ವ್ಯವಸ್ಥೆಯಲ್ಲಿರುವಾಗ ಸಾಂವಿಧಾನಿಕ ಸಾಧಕ - ಭಾದಕಗಳ ಕುರಿತು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತನಿಖೆಯಿಂದ ಸತ್ಯಾಂಶ ಹೊರ ಬರುತ್ತದೆ
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಕಿರುವ ವಿಡಿಯೋ ಬಾಂಬ್ ಕುರಿತು ಪ್ರತಿಕ್ರಿಯಿಸಿದ ಕಾರಜೋಳ, ಇಂಥ ವಿಷಯದಲ್ಲಿ ರಾಜಕೀಯ ಮಾಡಬಾರದು. ತನಿಖೆ ನಡೆಯುತ್ತದೆ, ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎಂದಿದ್ದಾರೆ. ಡಿಕೆಶಿಗೆ ಸಂತೋಷ್ ಆತ್ಮಹತ್ಯೆ ಯತ್ನ ಮೊದಲೇ ಗೊತ್ತಿತ್ತು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ಬದಲಾದ ಸ್ವಾಮೀಜಿಗಳಂತೆ ತ್ರಿಕಾಲ ಜ್ಞಾನಿಯಾಗಿದ್ದಾರೆ ಅನ್ನಿಸುತ್ತಿದೆ ಎಂದು ಲೇವಡಿ ಮಾಡಿದರು.

Last Updated : Nov 30, 2020, 2:04 PM IST

ABOUT THE AUTHOR

...view details