ಕರ್ನಾಟಕ

karnataka

ETV Bharat / state

ಬಸ್​ ಬಿಟ್ರೂ ಜನ ಬರ್ತಿಲ್ಲ: ಸರ್ಕಾರಕ್ಕೆ ಮತ್ತೆ ಆರ್ಥಿಕ ಹೊಡೆತ ಸಾಧ್ಯತೆ

ಕೊರೊನಾ ಭೀತಿ ಹಿನ್ನೆಲೆ ಬಸ್ ನಿಲ್ದಾಣಗಳಲ್ಲಿ ಬಸ್ ಬಂದ್ರೂ ಪ್ರಯಾಣಿಕರು ಮಾತ್ರ ಸಂಚಾರದಿಂದ ದೂರವೇ ಉಳಿದಿದ್ದು, ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದೆ.

bus-traffic-may-worsen-the-states-economy
ರಾಜ್ಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕ್ಷೀಣಿಸಲಿದೆಯೇ ಬಸ್​ ಸಂಚಾರ

By

Published : May 20, 2020, 3:47 PM IST

ವಿಜಯಪುರ:ಬಸ್ ನಿಲ್ದಾಣಗಳಲ್ಲಿ ಬಸ್ ಬಂದ್ರೂ ಪ್ರಯಾಣಿಕರು ಮಾತ್ರ ಕೊರೊನಾ ಭೀತಿ ಹಿನ್ನೆಲೆ ಸಂಚಾರದಿಂದ ದೂರವೇ ಉಳಿದಿದ್ದು, ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದೆ. ಪ್ರಯಾಣಿಕರು ಕನಿಷ್ಠ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ಇನ್ನಷ್ಟು ಕ್ಷೀಣಿಸುವ ಲಕ್ಷಣ ಕಾಣಿಸುತ್ತಿದೆ.

ರಾಜ್ಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕ್ಷೀಣಿಸಲಿದೆಯೇ ಬಸ್​ ಸಂಚಾರ

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿನ್ನೆಯಿಂದ ಬಸ್ ಪ್ರಯಾಣ ಪ್ರಾರಂಭವಾಗಿದ್ರೂ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರ ಏರಿಕೆ ಕಂಡಿಲ್ಲ.‌ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದು, ಜಿಲ್ಲಾದ್ಯಂತ 250ಕ್ಕೂ ಅಧಿಕ ಬಸ್‌ಗಳು ರಸ್ತೆಗಳಿದಿವೆ. ಬಸ್ ನಿಲ್ದಾಣದ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರಿಲ್ಲದೆ‌ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗಿರುವ ಕಾರಣದಿಂದ ಜನರು ಬಸ್ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಆಗಮಿಸದ ಹಿನ್ನೆಲೆ ಸಾರಿಗೆ ಅಧಿಕಾರಿಗಳು ಲಾಭ ನಷ್ಟದ ಲೆಕ್ಕಾಚಾರ ಮಾಡುವಂತಾಗಿದೆ.

ABOUT THE AUTHOR

...view details