ಕರ್ನಾಟಕ

karnataka

ETV Bharat / state

ವಿಜಯಪುರಕ್ಕೆ ಕಾರ್ಮಿಕರನ್ನು ಕರೆತರಲು ಬೆಂಗಳೂರಿಗೆ ಬಸ್​ ಸಂಚಾರ: ಡಿಸಿ ಮಾಹಿತಿ - ಅಧಿಕಾರಿಗಳಿಗೆ ಸೂಚಿನೆ

ಇಂದಿನಿಂದ ಎಲ್ಲ ತಾಲೂಕು ಕೇಂದ್ರಗಳಿಂದ ಬೆಂಗಳೂರಿಗೆ ಕಾರ್ಮಿಕರನ್ನು ಕರೆತರಲು ಬಸ್‌ಗಳು ಹೋಗುತ್ತಿದ್ದು, ಜಿಲ್ಲೆಗೆ ಬರುವ ಮತ್ತು ಹೋಗುವ ಕಾರ್ಮಿಕರು ಕಡ್ಡಾಯವಾಗಿ ಸೇವಾ ಸಿಂಧು ವೆಬ್‌ಸೈಟ್ ಮೂಲಕ ನೋಂದಾಯಿಸಬೇಕು. ಅದರಂತೆ ಮಹಾರಾಷ್ಟ ಹೊರತು ಪಡಿಸಿ ಇತರ ರಾಜ್ಯಗಳಿಗೆ ಹೋಗಲು ನಿಗದಿತ ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ

Bus Transport to Bangalore to Bring Workers: DC Informs
ವಿಜಯಪುರಕ್ಕೆ ಕಾರ್ಮಿಕರನ್ನು ಕರೆತರಲು ಬೆಂಗಳೂರಿಗೆ ಬಸ್​ ಸಂಚಾರ: ಡಿಸಿ ಮಾಹಿತಿ

By

Published : May 2, 2020, 11:12 PM IST

ವಿಜಯಪುರ:ಮಹಾರಾಷ್ಟದ ಕಾರ್ಮಿಕರನ್ನು ಹೊರತುಪಡಿಸಿ ಇತರ ರಾಜ್ಯಗಳಿಂದ ಜಿಲ್ಲೆಗೆ ಬರುವ ಕಾರ್ಮಿಕರಿಗೆ ಮೇ 4 ರಿಂದ ಪ್ರವೇಶಾವಕಾಶವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ತಿಳಿಸಿದ್ದಾರೆ. ಅಲ್ಲದೇ ಇವರಿಗೆ ಸೂಕ್ತ ತಪಾಸಣೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್​​ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಗೋವಾ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯ ಪ್ರದೇಶಗಳಿಂದ ಜಿಲ್ಲೆಗೆ ಮರಳುವ ಕಾರ್ಮಿಕರಿಗೆ ಪ್ರವೇಶಾವಕಾಶ ನೀಡುವ ಸಂದರ್ಭದಲ್ಲಿ ನಿಗದಿ ಪಡಿಸಿದ ಸಮಿತಿಯಿಂದ ಸೂಕ್ತ ತಪಾಣೆಗೆ ಒಳಪಡಿಸಬೇಕು. ಕ್ವಾರಂಟೈನ್ ಅಗತ್ಯವಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕಂಟೇನ್ಮೆಂಟ್ ವಲಯಗಳು ಮತ್ತು ವಿಜಯಪುರ ನಗರಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗುತ್ತಿದ್ದು, ಕಂಟೇನ್ಮೆಂಟ್ ವ್ಯಾಪ್ತಿ ಹೊರಗಡೆ ಜಿಲ್ಲಾದ್ಯಂತ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಟ್ಯಾಕ್ಸಿ, ಕ್ಯಾಬ್​ನಲ್ಲಿ ಡ್ರೈವರ್ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಸ್‌ಗಳಿಗೆ, ಪ್ರಯಾಣಿಕರ ಸಾಗಣೆ ವಾಹನಗಳಿಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.

ವಿಶೇಷವಾಗಿ ಇಂಡಿ ಮತ್ತು ಮಹಾರಾಷ್ಟ ರಾಜ್ಯದ ಗಡಿ ಭಾಗದಲ್ಲಿರುವ ವಾಹನಗಳ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಿದರು.

ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಅವಕಾಶವಿದ್ದು, ಮಾಲ್‌ಗಳು, ಥೀಯೇಟರ್‌ಗಳು ಸಾರ್ವಜನಿಕ ಮನರಂಜನಾ ಸ್ಥಳಗಳು, ಪ್ರಾರ್ಥನಾ ಸ್ಥಳಗಳಲ್ಲಿ ಎಂದಿನಂತೆ ನಿರ್ಬಂಧ ಇರಲಿದ್ದು, ಹೋಟೆಲ್​​ಗಳ ಮೂಲಕ ಪಾರ್ಸೆಲ್ ಮಾತ್ರ ಪಡೆಯಲು ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು.

ಇಂದಿನಿಂದ ಎಲ್ಲ ತಾಲೂಕು ಕೇಂದ್ರಗಳಿಂದ ಬೆಂಗಳೂರಿಗೆ ಕಾರ್ಮಿಕರನ್ನು ಕರೆತರಲು ಬಸ್‌ಗಳು ಹೋಗುತ್ತಿದ್ದು, ಜಿಲ್ಲೆಗೆ ಬರುವ ಮತ್ತು ಹೋಗುವ ಕಾರ್ಮಿಕರು ಕಡ್ಡಾಯವಾಗಿ ಸೇವಾ ಸಿಂಧು ವೆಬ್‌ಸೈಟ್ ಮೂಲಕ ನೋಂದಾಯಿಸಬೇಕು. ಅದರಂತೆ ಮಹಾರಾಷ್ಟ ಹೊರತು ಪಡಿಸಿ ಇತರ ರಾಜ್ಯಗಳಿಗೆ ಹೋಗಲು ನಿಗದಿತ ಟಿಕೆಟ್ ದರ ನಿಗದಿಪಡಿಸಲಾಗಿದೆ. ಅದೇ ರೀತಿ, ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರ ಬಗ್ಗೆ ತಕ್ಷಣ ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಸರಕು ಸಾಗಣೆಗೆ ಅವಕಾಶವಿದೆ. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಬಗ್ಗೆ ತೀವ್ರ ನಿಗಾ ಇಡಬೇಕು. 30 ಚೆಕ್‌ಪೋಸ್ಟ್​​ಗಳ ಮೇಲೆ ತೀವ್ರ ನಿಗಾ ಇಡಬೇಕು. ಕಂಟೇನ್ಮೆಂಟ್ ವಲಯದ ಒಳಗಡೆ ಜನರ ಓಡಾಟಕ್ಕೆ ಅವಕಾಶವಿದ್ದರೂ ಕೂಡ ಕಡ್ಡಾಯವಾಗಿ ಸಾಮಾಜಿಕ ಅಂತರ ನಿಯಮ ಪಾಲಿಸಬೇಕು. ಕಂಟೇನ್ಮೆಂಟ್ ವಲಯದಿಂದ ತುರ್ತು, ತೀವ್ರತರ ಕಾಯಿಲೆ, ಗರ್ಭಿಣಿಯರಿಗೆ ಮಾತ್ರ ಹೋಗಿ ಬರಲು ಅವಕಾಶವಿದ್ದು, ಬೇರೆಯವರು ಹೋಗಿ ವಾಪಸ್ ಕಂಟೇನ್ಮೆಂಟ್ ವಲಯಕ್ಕೆ ಬಾರದೇ ಇದ್ದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ABOUT THE AUTHOR

...view details