ವಿಜಯಪುರ: ಬೈಕ್ ಅಪಘಾತ ತಪ್ಪಿಸಲು ಹೋಗಿ ರಸ್ತೆಯ ಪಕ್ಕಕ್ಕೆ ಬಸ್ ಜಾರಿ 43 ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜ್ಞಾನ ಜ್ಯೋತಿ ಶಾಲೆ ಎದುರು ನಡೆದಿದೆ.
ದೇವರಹಿಪ್ಪರಗಿ ಪಟ್ಟಣದಿಂದ ತಾಳಿಕೋಟಿಗೆ ಹೋಗುತ್ತಿರುವ ವೇಳೆ ಈ ಅವಘಡ ನಡೆದಿದೆ. ಬೈಕ್ ಅಪಘಾತ ತಪ್ಪಿಸಲು ಹೋಗಿ ರಸ್ತೆಯ ಪಕ್ಕದ ಜಮೀನಿಗೆ ಬಸ್ ನುಗ್ಗಿದೆ.