ಕರ್ನಾಟಕ

karnataka

ETV Bharat / state

ಮಾಯಾವತಿ ಪ್ರಧಾನಿಯಾದಾಗ ಮಾತ್ರ ಶೋಷಿತರಿಗೆ ನ್ಯಾಯ ದೊರಕಲು ಸಾಧ್ಯ: ತೊರವಿ - Muddebihala latest news

ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಸಲಾಯಿತು.

Meeting
Meeting

By

Published : Oct 26, 2020, 6:53 AM IST

ಮುದ್ದೇಬಿಹಾಳ: ದೇಶದಲ್ಲಿ ಶೋಷಿತ ವರ್ಗದವರಿಗೆ ನ್ಯಾಯ ದೊರೆಯಬೇಕು ಎಂದರೆ ಬಹುಜನ ಸಮಾಜದ ನಾಯಕಿ ಮಾಯಾವತಿ ಪ್ರಧಾನಿಯಾದಾಗ ಮಾತ್ರ ಸಾಧ್ಯವಿದೆ ಎಂದು ಬಿಎಸ್​​ಪಿ ರಾಜ್ಯ ಕಾರ್ಯದರ್ಶಿ ಕೆ.ಆರ್.ತೊರವಿ ಹೇಳಿದರು.

ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಬರೆದಿರುವ ಸಂವಿಧಾನದ ಆಶಯಗಳನ್ನು ಈಡೇರಿಸಲು ಯುವ ಜನಾಂಗ ಶೋಷಿತರ ಪರ ನಿಲ್ಲುವ ಬಿಎಸ್​​ಪಿಯೊಂದಿಗೆ ಕೈ ಜೋಡಿಸಬೇಕು ಎಂದರು.

ಇದೇ ವೇಳೆ ಬಹುಜನ ಸಮಾಜ ಪಕ್ಷದ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು. ಸಂಯೋಜಕರನ್ನಾಗಿ ಪರಶುರಾಮ ಬಸಪ್ಪ ಬಸರಕೊಡ, ಅಧ್ಯಕ್ಷರನ್ನಾಗಿ ಮುತ್ತುರಾಜ ಪರಮಪ್ಪ ತಳವಾರ, ಉಪಾಧ್ಯಕ್ಷರನ್ನಾಗಿ ಮಾರುತಿ ತಿಮ್ಮಣ ಸಿದ್ದಾಪುರ ಅವರನ್ನು ನೇಮಿಸಲಾಯಿತು. ತಾಲೂಕು ಕಾರ್ಯಕರ್ತರ ಸಮಕ್ಷಮದಲ್ಲಿ ಹಲವಾರು ನಾಯಕರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ, ನ್ಯಾಯವಾದಿ ಕೆ.ಬಿ.ದೊಡಮನಿ, ಬೆಳಗಾವಿ ವಿಭಾಗದ ಉಸ್ತುವಾರಿಗಳಾದ ಯಶವಂತ ಪೂಜಾರಿ, ರಾಜು ಮಾದರ ಇದ್ದರು‌.

ABOUT THE AUTHOR

...view details