ಕರ್ನಾಟಕ

karnataka

ETV Bharat / state

ಆಟವಾಡುತ್ತಿದ್ದ ಬಾಲಕ ನೀರಿನ ಟ್ಯಾಂಕ್​ಗೆ ಬಿದ್ದು ಸಾವು - ಇಂಡಿ ಬಾಲಕ ಸಾವು ಪ್ರಕರಣ

ಆಟವಾಡುತ್ತಿದ್ದ ಬಾಲಕ ನೀರಿನ ಟ್ಯಾಂಕ್​ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಇಂಡಿ ತಾಲೂಕಿನಲ್ಲಿ ನಡೆದಿದೆ.

boy-found-dead-in-water-tank-in-indi
ಆಟವಾಡುತ್ತಿದ್ದ ಬಾಲಕ ನೀರಿನ ಟ್ಯಾಂಕ್​ಗೆ ಬಿದ್ದು ಸಾವು

By

Published : Jan 12, 2022, 7:16 AM IST

ವಿಜಯಪುರ:ಆಟವಾಡುತ್ತಿದ್ದ ಬಾಲಕ ನೀರಿನ ಟ್ಯಾಂಕ್​ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಸಾಲೋಟಗಿ ಗ್ರಾಮದ ನಿವಾಸಿ ರಾಹುಲ್ ಘತ್ತರಗಿ (3) ಮೃತಪಟ್ಟ ಬಾಲಕ. ಮನೆಯ ಹತ್ತಿರ ಹೊಸದಾಗಿ ನಿರ್ಮಿಸಿದ ನೀರಿನ ಟ್ಯಾಂಕ್​ ಬಳಿ ಆಟವಾಡಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮನೆಯ ಕಟ್ಟಡ ನಿರ್ಮಾಣಕ್ಕಾಗಿ ನೀರಿನ ಟ್ಯಾಂಕ್ ಮಾಡಲಾಗಿತ್ತು. ಅದಕ್ಕೆ ಯಾವುದೇ ಮುಚ್ಚಳಿಕೆ ಇಲ್ಲದಿರುವುದು ದುರಂತಕ್ಕೆ ದಾರಿಯಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಸಾಯಂಕಾಲ ಎಷ್ಟೇ ಹುಡುಕಿದರೂ ಬಾಲಕ ಸಿಗದ ಕಾರಣ ನೀರಿನ ಟ್ಯಾಂಕ್ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಇಂಡಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಡ್ಯದಲ್ಲಿ ಪ್ರೀತಿಸಿ ಮದುವೆಯಾದ ದಂಪತಿ ಮಗು ಕೊಲೆ ಮಾಡಿ, ಆತ್ಮಹತ್ಯೆ!

ABOUT THE AUTHOR

...view details