ವಿಜಯಪುರ:ಮನೆಯಿಂದ ಬಹಿರ್ದೆಸೆಗೆ ಹೋಗಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದಲ್ಲಿ ನಡೆದಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಕಳೆದ ಸಪ್ಟೆಂಬರ್ 19 ರಂದು ಮನೆಯಿಂದ ತೆರಳಿದ್ದ ಬಾಲಕ ಉಮೇಶ ರಾಠೋಡ್ (16) ಶವವಾಗಿ ಪತ್ತೆಯಾಗಿದ್ದಾನೆ.