ಸುರಪುರ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಬೋವಿ ಗಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಬೋವಿ ಗಲ್ಲಿ ಗೆಳೆಯರ ಬಳಗದಿಂದ ಯೋಧರಿಗೆ ಸನ್ಮಾನ - Surapur
ಬೋವಿ ಗಲ್ಲಿ ಗೆಳೆಯರ ಬಳಗದ ವತಿಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಸುರಪುರ ತಾಲೂಕಿನ ಯೋಧರನ್ನು ಸನ್ಮಾನಿಸಲಾಯಿತು.
ಬೋವಿಗಲ್ಲಿ ಗೆಳೆಯರ ಬಳಗದ ವತಿಯಿಂದ ಯೋಧರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸುರಪುರ ತಾಲೂಕಿನ ಯೋಧರಾದ ಶರಣು ಹೊಸಮನಿ, ಮಾನಯ್ಯ ದೇವರಗೋನಾಲ, ಗಂಗಾಧರ ಕರಡಕಲ್, ಬಸವರಾಜ ಹಡಪದ, ಭೀಮಣ್ಣ ಪಿರಾಪುರ್ ಲಕ್ಷ್ಮಿಪುರ ಹಾಗೂ ರಮೇಶ್ ನಾಯಕ ಇವರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧರು, ನಾವು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಹೆಮ್ಮೆ ಎನಿಸುತ್ತದೆ. ನಮ್ಮ ಸೇವೆ ಗುರುತಿಸಿ ಸನ್ಮಾನಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.