ಕರ್ನಾಟಕ

karnataka

ETV Bharat / state

ವಿಜಯಪುರ: ಬಿಸಿಯೂಟದ ಅಕ್ಕಿ ಕದ್ದು ಮಾರಾಟಕ್ಕೆ ಯತ್ನಿಸಿದ ಮುಖ್ಯ ಶಿಕ್ಷಕ - ಬಿಸಿಯೂಟದ ಅಕ್ಕಿ ಕದ್ದು ಮಾರಾಟಕ್ಕೆ ಯತ್ನಿಸಿದ ಮುಖ್ಯ ಶಿಕ್ಷಕ

ಮಧ್ಯಾಹ್ನದ ಬಿಸಿಯೂಟದ ಅಕ್ಕಿಯನ್ನು ಕದ್ದು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಸಿಕ್ಕಿ ಬಿದ್ದರು.

ಬಿಸಿಯೂಟದ ಅಕ್ಕಿ ಮಾರಾಟಕ್ಕೆ ಯತ್ನ
ಬಿಸಿಯೂಟದ ಅಕ್ಕಿ ಮಾರಾಟಕ್ಕೆ ಯತ್ನ

By

Published : Jun 12, 2022, 9:20 AM IST

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಅಕ್ಕಿಯನ್ನು ಮುಖ್ಯ ಶಿಕ್ಷಕರೊಬ್ಬರು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಗ್ರಾಮಸ್ಥರು ಅಕ್ಕಿ ಸಾಗಿಸುವ ವಾಹನವನ್ನು ತಡೆದಿರುವ ಘಟನೆ ಗುರುವಾರ ರಾತ್ರಿ ನಡೆಯಿತು.

ಮುಖ್ಯ ಶಿಕ್ಷಕ ಎಸ್.ಡಿ.ಬಿದನೂರ ಶಾಲೆಯ ಅಡುಗೆ ಕೋಣೆಯಲ್ಲಿದ್ದ 50ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ಟಾಟಾ ಏಸ್​ ವಾಹನದಲ್ಲಿ ಹೇರುತ್ತಿದ್ದರು. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಹೆದರಿದ ಮುಖ್ಯ ಶಿಕ್ಷಕ ಹಾಗೂ ವಾಹನ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ತಕ್ಷಣ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ವಾಹನದ ಚಕ್ರಗಳ ಗಾಳಿ ತೆಗೆದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಒತ್ತಾಯಿಸಿದರು.


ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಪ್ರಾಥಮಿಕ ಶಾಲೆ ಅಧಿಕಾರಿಗಳು ಹಾಗೂ ಬಿಸಿಯೂಟಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರ ಜತೆ ಮಾತುಕತೆ ನಡೆಸಿ, ಮುಖ್ಯಶಿಕ್ಷಕನ ವಿರುದ್ಧ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಿಇಒ ಭೇಟಿ:ಸಿಂದಗಿ ಬಿಇಒ ಎಸ್.ಎಸ್.ನಾಗನೂರ ಸಹ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದರು. ನಂತರ ಮಾತನಾಡಿದ ಅವರು, ಮುಖ್ಯ ಶಿಕ್ಷಕ ಸದ್ಯಕ್ಕೆ ಪರಾರಿಯಾಗಿದ್ದಾನೆ. ಶಾಲೆಗೆ ವಾಪಸ್ ಆಗದಿದ್ದರೆ ಆತನನ್ನು ತಕ್ಷಣ ಅಮಾನತು ಮಾಡಲಾಗುವುದು, ಜೊತೆಗೆ ಇಲಾಖಾ ತನಿಖೆ ಸಹ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಮಂಗಳೂರು: ನಕಲಿ ರೈಲ್ವೆ ಫಿಟ್ನೆಸ್‌ ಸರ್ಟಿಫಿಕೆಟ್‌ ನೀಡಿ ವಂಚನೆ, ವೈದ್ಯನ ಬಂಧನ

ABOUT THE AUTHOR

...view details