ವಿಜಯಪುರ: ಬೊಲೆರೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಬಲೇಶ್ವರ ತಾಲೂಕಿನ ಯಕ್ಕುಂಡಿ-ಅರ್ಜುನಗಿ ಗ್ರಾಮದ ಮಧ್ಯೆ ಸಂಭವಿಸಿದೆ.
ಬಬಲೇಶ್ವರದಲ್ಲಿ ಬೊಲೆರೋ-ಬೈಕ್ ಮಧ್ಯೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು - ವಿಜಯಪುರದಲ್ಲಿ ಬೊಲೊರೋ ಬೈಕ್ ಮುಖಾಮುಖಿ ಡಿಕ್ಕಿ ಸುದ್ದಿ
ಬೊಲೆರೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಬಲೇಶ್ವರ ತಾಲೂಕಿನ ಯಕ್ಕುಂಡಿ-ಅರ್ಜುನಗಿ ಗ್ರಾಮದ ಮಧ್ಯೆ ಸಂಭವಿಸಿದೆ.

ಬೊಲೊರೋ-ಬೈಕ್ ಮುಖಾಮುಖಿ ಡಿಕ್ಕಿ
ಅಪಘಾತದಲ್ಲಿ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ತುಕಾರಾಂ (48) ಮತ್ತು ಯಕ್ಕುಂಡಿ ಗ್ರಾಮದ ಹನುಮಂತ ಮೂಡಲಗಿ (50) ಎಂಬುವರು ಸಾವನ್ನಪ್ಪಿದವರು ಎನ್ನಲಾಗಿದೆ.
ವೇಗವಾಗಿ ಬರುತ್ತಿದ್ದ ಬೊಲೆರೋ ವಾಹನಕ್ಕೆ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.