ವಿಜಯಪುರ:ಪಂಚಮಸಾಲಿ ಸಮುದಾಯಕ್ಕೆ ಡಿಸೆಂಬರ್ 12 ರಿಂದ 19 ರ ಒಳಗೆ ಹಿಂದುಳಿದ ವರ್ಗದ ಆಯೋಗದಿಂದ ವರದಿ ತರಿಸಿಕೊಂಡು, 2 ಎ ಮೀಸಲಾತಿ ನೀಡಬೇಕು, ಇಲ್ಲದಿದ್ದರೆ 25 ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಬಿ ಎಮ್ ಪಾಟೀಲ ಹೇಳಿದರು.
ಈ ಕುರಿತು ವಿಜಯಪುರ ನಗರದಲ್ಲಿ ಮಾದ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಬಿ ಎಮ್ ಪಾಟೀಲ ಮಾತನಾಡುತ್ತ ಡಿಸೆಂಬರ್ 19 ರ ಒಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಸಿಎಂ ಘೋಷಣೆ ಮಾಡದೇ ಇದ್ದರೆ, ಬೆಳಗಾವಿ ಸುವರ್ಣ ಸೌಧದ ಮುಂದು ಡಿಸೆಂಬರ್ 22 ರಂದು 25 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ ಎಂದರು.