ವಿಜಯಪುರ:ಶಿವಾಜಿ ಜಯಂತಿ ನಿಮಿತ್ತ ಮುಸ್ಲಿಂ ಸಮುದಾಯದಿಂದ ರಕ್ತದಾನ ಶಿಬಿರ ನಡೆಸಲಾಯಿತು.
ಛತ್ರಪತಿ ಶಿವಾಜಿ ಜಯಂತಿ ನಿಮಿತ್ತ ಮುಸ್ಲಿಂ ಸಮುದಾಯದಿಂದ ರಕ್ತದಾನ ಶಿಬಿರ - ವಿಜಯಪುರ ಸುದ್ದಿ
ವಿಜಯಪುರ ನಗರದಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾದ ರಕ್ತದಾನ ಶಿಬಿರಕ್ಕೆ ವಿಜಯಪುರ ನಗರದ ಹಲವು ಮುಸ್ಲಿಮರು ಸ್ವಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದರು. 100ಕ್ಕೂ ಹೆಚ್ಚು ಮಹಿಳೆಯರೇ ಮುಂದೆ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
blood-donation-camp-from-muslim-community
ನಗರದ ಶಾಹೀನ್ ಭಾಗದಲ್ಲಿ ಮುಸ್ಲಿಂ ಸಮುದಾಯದಿಂದ ಛತ್ರಪತಿ ಶಿವಾಜಿ ಜಯಂತಿ ನಿಮಿತ್ತ ಮಹಿಳೆಯರು ಹಾಗೂ ಪುರುಷರು ರಕ್ತದಾನ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದರು. ಅಲ್ ಅಮ್ಮಿನ್ ಆಸ್ಪತ್ರೆ ಸಿಬ್ಬಂದಿ ರಕ್ತ ಪಡೆದರು. ಬೆಳಗ್ಗೆ ಹತ್ತು ಗಂಟೆಗೆ ಆರಂಭವಾದ ರಕ್ತದಾನ ಶಿಬಿರಕ್ಕೆ ವಿಜಯಪುರ ನಗರದ ಹಲವು ಮುಸ್ಲಿಮರು ಸ್ವಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದರು. 100ಕ್ಕೂ ಹೆಚ್ಚು ಮಹಿಳೆಯರೇ ಮುಂದೆ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.