ವಿಜಯಪುರ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಾರ್ಡ್ ನಂಬರ 14ರಲ್ಲಿ ಕಿಡಿಗೇಡಿಗಳು ಮಾಟ ಮಂತ್ರದ ಮೊರೆ ಹೋಗಿದ್ದಾರೆ. ನಗರದ ಶಿಖಾರಖಾನೆಯ ಅನಂತ ಲಕ್ಷ್ಮಿ ಹಾಲ್ ಬಳಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿ ನಿಂಬೆಹಣ್ಣು, ಎಲೆ, ಮೊಟ್ಟೆ, ಹಣ ಸೇರಿದಂತೆ ಹೂವುಗಳೊಂದಿಗೆ ಮಾಟ ಮಂತ್ರ ಮಾಡಿ ಎಸೆದು ಹೋಗಿದ್ದಾರೆ.
ಅಲ್ಲದೇ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂ 14ರಲ್ಲಿ ಪರಿಶಿಷ್ಟ ಜಾತಿ(ಎಸ್ ಸಿ)ಗೆ ಮೀಸಲಾಗಿರುವ ಕಾರಣ ಕೆಲವರು ಇದನ್ನು ಸಹಿಸದೇ ಈ ರೀತಿ ಮಾಟ ಮಂತ್ರ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಎಂದೂ ನಡೆಯದ ಈ ವಿಚಿತ್ರ ಬೆಳವಣಿಗೆ ಚುನಾವಣೆ ಘೋಷಣೆ ಆದ ಮೇಲೆ ನಡೆಯುತ್ತಿದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.