ವಿಜಯಪುರ:ಜಿಲ್ಲೆಗೆ ಮಾಜಿ ಸಚಿವ ಎಂಬಿ ಪಾಟೀಲ್ ಕೊಡುಗೆ ಶೂನ್ಯ. ಅವರು ಗೂಂಡಾಗಿರಿ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.
ಗೂಂಡಾಗಿರಿ ರಾಜಕಾರಣ ಮಾಡಿದ ಪಾಟೀಲರನ್ನ ಜನ ಮನೆಯಲ್ಲಿ ಕೂರಿಸಿದ್ದಾರೆ: ಕಟೀಲ್ ಟಾಂಗ್ - BJP state President Nalin Kumar Katil
ಮಾಜಿ ಸಚಿವ ಎಂ.ಬಿ. ಪಾಟೀಲ್ ಜಿಲ್ಲೆಯಲ್ಲಿ ದಬ್ಬಾಳಿಕೆ ರಾಜಕಾರಣ ಮಾಡಿದ್ದಾರೆ. ಅವರು ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆ ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟಾಂಗ್ ನೀಡಿದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಹರ್ಡೇಕರ್ ಮಂಜಪ್ಪ ಸಭಾ ಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಸಭೆಯಲ್ಲಿ ಭಾಗಿಯಾಗಿ ಬಳಿಕ ಅವರು ಮಾತನಾಡಿದರು. ಎಂಬಿ ಪಾಟೀಲ್ ಜಿಲ್ಲೆಯಲ್ಲಿ ದಬ್ಬಾಳಿಕೆ ರಾಜಕಾರಣ ಮಾಡಿದ್ದಾರೆ. ಅವರು ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆ ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ಟಾಂಗ್ ನೀಡಿದರು.
ನಿಮ್ಮ ಗೂಂಡಾಗಿರಿ ರಾಜಕಾರಣ ಜನರಿಗೆ ತಿಳಿದಿದೆ. ಇಂತಹ ರಾಜಕಾರಣ ಬಿಟ್ಟು ಬಿಡಿ, ಇಂಥಾ ರಾಜಕಾರಣ ಮಾಡಿದ್ದಕ್ಕೆ ಜನರು ಮನೆಯಲ್ಲಿ ಕೂರಿಸಿದ್ದಾರೆ. ಸದ್ಯ ಮನೆಯಲ್ಲಿದ್ದುಕೊಂಡು ಕೆಟ್ಟ ರಾಜಕಾರಣ ಮಾಡಬೇಡಿ, ಬೇರೆಯವರು ಮಾಡಿದ ಕೆಲಸಗಳಿಗೆ ತೆಂಗಿನಕಾಯಿ ಒಡೆದು ಪ್ರಚಾರ ಗಿಟ್ಟಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.