ವಿಜಯಪುರ:ಸ್ವತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪರವಾಗಿ ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊರೆಸ್ವಾಮಿ ಪರ ಹೋರಾಟಗಾರರಿಗೆ ಫೇಸ್ಬುಕ್ನಲ್ಲಿ ಯತ್ನಾಳ್ ಆಕ್ರೋಶ - ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪರ ನಿಂತು ಪ್ರತಿಭಟನೆ ಮಾಡುತ್ತಿರುವವರ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರಿಗೆ ಪ್ರಶ್ನೆ ಕೇಳಿದ ಶಾಸಕ ಯತ್ನಾಳ್, ಮಾನ್ಯ ಸಿದ್ದರಾಮಯ್ಯನವರೇ ಹಾಗೂ ಕಾಂಗ್ರೆಸ್‌ನ ಬುದ್ದಿಜೀವಿಗಳೇ, ನೀವು ಅಫ್ಜಲ್ ಗುರು ವಿಚಾರದಲ್ಲಿ ಯಾಕೆ ಪ್ರತಿಭಟನೆ ಮಾಡಲಿಲ್ಲ? ತುಕಡೆ ತುಕಡೆ ಗ್ಯಾಂಗ್ ಪರ ರಾಹುಲ್ ಗಾಂಧಿ ಮಾತನಾಡಿದಾಗ ಯಾಕೆ ಪ್ರತಿಭಟಿಸಲಿಲ್ಲ? ದೊರೆಸ್ವಾಮಿ ಯಾವಾಗ ದೇಶದ ಪರವಾಗಿ ಧ್ವನಿ ಎತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿ ಎಂದು ಕಿಡಿ ಕಾರಿದ್ದಾರೆ.
ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆ ಎಂಬುದು ನಮಗೆ ಗೊತ್ತಿದೆ ಎಂದು ಬರೆದುಕೊಂಡಿರುವ ಯತ್ನಾಳ್, ದೇಶದ ವಿರುದ್ಧ ಮಾತನಾಡುವವರ ವಿರುದ್ಧ ನನ್ನ ಹೋರಾಟ ಎಂದು ಎಚ್ಚರಿಕೆ ನೀಡಿದ್ದಾರೆ.