ವಿಜಯಪುರ:ನ್ಯಾಯಾಲಯದಲ್ಲಿರುವ ಅನರ್ಹ ಶಾಸಕರ ಬಗ್ಗೆ ಮಾತನಾಡಿದರೆ ನಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಾನು ಜೈಲಿಗೆ ಹೋಗಬೇಕಾಗುತ್ತದೆ.. ಬಿಜೆಪಿ ಶಾಸಕ ಯತ್ನಾಳ್ ಹೀಗ್ಯಾಕೆ ಅಂದರು? - ಅನರ್ಹ ಶಾಸಕರ ತೀರ್ಪು ವಿಚಾರ
ನ್ಯಾಯಾಲಯದಲ್ಲಿರುವ ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ರೆ ನಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ತೀರ್ಪು ಹೇಳೋಕೆ ನಾನೇನು ಜಡ್ಜ್ ಅಲ್ಲ, ನಾನು ತೀರ್ಪು ಹೇಳಿದ್ರೆ ಜೈಲಿಗೆ ಹಾಕ್ತಾರೆ ಎಂದರು. ಅನರ್ಹ ಶಾಸಕರಿಗೆ ಒಳ್ಳೆಯ ಫಲಿತಾಂಶ ಬರುತ್ತದೆ. ಅನರ್ಹ ಶಾಸಕರಿಗೆ ಪುನರ್ಜನ್ಮ ಆಗುತ್ತದೆ ಎಂದರು. ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನೇನು ಭವಿಷ್ಯ ಹೇಳೋನು ಅಲ್ಲ, ನಾನು ಜ್ಯೋತಿಷ್ಯನೂ ಅಲ್ಲ, ಜನರು ತೀರ್ಪು ಕೊಡಬೇಕು ಎಂದರು.ಇನ್ನು, ಮೈತ್ರಿ ಸರ್ಕಾರ ಕೆಟ್ಟ ಸರ್ಕಾರ ಎನ್ನುವ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ವಿಚಾರ ವ್ಯಂಗ್ಯವಾಗಿ ಉತ್ತರಿಸಿದ ಯತ್ನಾಳ ಹೆಚ್‌ಡಿಕೆಗೆ ಈಗ ಜ್ಞಾನೋದಯವಾಗಿದೆ. ಅವರಿಗೆ ಈಗ ಆತ್ಮಾವಲೋಕನ ಆಗಿದೆ. ಅವರಿಗೆ ಕಾಂಗ್ರೆಸ್ ದೊಡ್ಡ ವೈರಿ. ಬಿಜೆಪಿ ವೈರಿ ಅಲ್ಲವೆಂದು ಹೇಳಿದ್ದಾರೆ ಎಂದರು.