ಕರ್ನಾಟಕ

karnataka

ETV Bharat / state

ಕುರ್ಚಿಗಾಗಿ ಸಚಿವ ಸಿ.ಸಿ ಪಾಟೀಲ್ ಎದುರೇ ಬಿಜೆಪಿ ಮುಖಂಡನ ಗಲಾಟೆ! - vijayapura BJP leaders clash

ಖುರ್ಚಿಗಾಗಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹಾಗೂ ಶಾಸಕ ಎಂ.ಬಿ ಪಾಟೀಲ್ ನಡುವೆ ವಾಗ್ವಾದ ನಡೆಯಿತು.

BJP leader clash with mb patil in front of Minister CC Patil
ಖರ್ಚಿಗಾಗಿ ಸಚಿವ ಸಿ.ಸಿ ಪಾಟೀಲ್ ಎದುರೇ ಬಿಜೆಪಿ ಮುಖಂಡನ ಗಲಾಟೆ!

By

Published : Jun 18, 2022, 7:30 PM IST

Updated : Jun 18, 2022, 7:41 PM IST

ವಿಜಯಪುರ: ಕುರ್ಚಿಗಾಗಿ ಬಿಜೆಪಿ ಮುಖಂಡ ಗಲಾಟೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕನಮಡಿ ಗ್ರಾಮದಲ್ಲಿ ನಡೆದಿದೆ.

ಸಚಿವ ಸಿ.ಸಿ ಪಾಟೀಲ್ ಎದುರೇ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹಾಗೂ ಶಾಸಕ ಎಂ.ಬಿ ಪಾಟೀಲ್ ನಡುವೆ ವಾಗ್ವಾದ ನಡೆಯಿತು. ರಸ್ತೆ ಕಾಮಗಾರಿಯ ಭೂಮಿ ಪೂಜೆಗಾಗಿ ಸಚಿವ ಸಿ.ಸಿ ಪಾಟೀಲ್ ಆಗಮಿಸಿದ್ದರು. ಈ ವೇಳೆ ನನಗೇಕೆ ಕುರ್ಚಿ ಹಾಕಿಲ್ಲ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಗಲಾಟೆ ಮಾಡಿದ್ದಾರೆ.

ಸಚಿವ ಸಿ.ಸಿ ಪಾಟೀಲ್ ಎದುರೇ ಗಲಾಟೆ

ಕಳೆದ ಎರಡು ಬಾರಿ ಎಂ.ಬಿ ಪಾಟೀಲ್ ವಿರುದ್ಧ ಸ್ಪರ್ಧಿಸಿ ವಿಜುಗೌಡ ಪಾಟೀಲ್ ಸೋಲು ಅನುಭವಿಸಿದ್ದರು. ಇಂದು ಭೂಮಿ ಪೂಜೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಜುಗೌಡ ಗಲಾಟೆ ನಡೆಸಿದ್ದಾರೆ. ಬ್ಯಾನರ್​ನಲ್ಲಿ ಫೋಟೋ ಹಾಗೂ ವೇದಿಕೆ ಮೇಲೆ ಕುರ್ಚಿ ಹಾಕಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಗಲಾಟೆಗೆ ಬೇಸತ್ತು ವೇದಿಕೆಯಿಂದ ಸಚಿವ ಸಿ.ಸಿ ಪಾಟೀಲ್ ಹೊರ ನಡೆದರು. ಕೂಡಲೇ ಸಿ.ಸಿ ಪಾಟೀಲ್​ ಅವರನ್ನು ಮತ್ತೆ ಶಾಸಕ ಎಂ.ಬಿ ಪಾಟೀಲ್ ಕರೆತಂದರು.

ಇದನ್ನೂ ಓದಿ:ಚಿಕ್ಕಮಗಳೂರು : ಸಿಇಟಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನಿಸಿದ ವಿದ್ಯಾರ್ಥಿ ಪೊಲೀಸ್ ವಶಕ್ಕೆ

Last Updated : Jun 18, 2022, 7:41 PM IST

ABOUT THE AUTHOR

...view details