ವಿಜಯಪುರ: ಪಕ್ಷಕ್ಕೆ ದ್ರೋಹವೆಸಗಿದ ಸದಸ್ಯರ ಭಾವಚಿತ್ರ ಸುಟ್ಟು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು... - vijayapura news
ನಮ್ಮ ಸದಸ್ಯರಿಗೆ ಕಾಂಗ್ರೆಸ್ ಪಕ್ಷ ಆಮಿಷ ಒಡ್ಡಿದೆ. ಹಣ ನೀಡಿ ಕುದುರೆ ವ್ಯಾಪಾರ ಮಾಡಿದೆ. ಹೀಗಾಗಿ ಅನ್ಯಾಯ ಮಾಡಿದವರ ಮೇಲೆ ಪಕ್ಷ ಶಿಸ್ತು ಕ್ರಮ ಜರುಗಿಸಿದೆ. ನಮ್ಮ ಬಳಿ ಸಂಖ್ಯಾ ಬಲವಿದ್ದರೂ ಕಾಂಗ್ರೆಸ್ ಮೋಸದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ತಿಳಿಸಿದ್ದಾರೆ.
ಭಾವಚಿತ್ರ ಸುಟ್ಟು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತ
ವಿಜಯಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಬೆಂಬಲ ಘೋಷಿಸಿದ ಜಿಲ್ಲಾ ಪಂಚಾಯತ್ ಸದಸ್ಯರ ಭಾವಚಿತ್ರಗಳನ್ನು ದಹಿಸಿ ನಗರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.