ಕರ್ನಾಟಕ

karnataka

By

Published : May 27, 2021, 7:35 AM IST

ETV Bharat / state

Happy Birthday ಟಫಿ! ಮುದ್ದಿನ ನಾಯಿಯ ಹುಟ್ದಬ್ಬ ಆಚರಿಸಿ ಖುಷಿಪಟ್ಟ ಕುಟುಂಬ

ಮನುಷ್ಯರು ಬರ್ತ್​ಡೇ ಆಚರಿಸಿಕೊಳ್ಳೋದು ಸಹಜ. ಆದ್ರೆ ಜಮಾನ​ ಬದಲಾಗಿದೆ. ಜನರು ತಾವು ಸಾಕಿರುವ ಮುದ್ದಿನ ನಾಯಿಗಳಿಗೂ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ.

Dog Birthday
Dog Birthday

ಮುದ್ದೇಬಿಹಾಳ(ವಿಜಯಪುರ): ಮನುಷ್ಯ ಹಾಗೂ ಮೂಕ ಪ್ರಾಣಿಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಪೂರಕವಾಗುವಂತೆ ಪಟ್ಟಣದ ಪುರಸಭೆ ಸದಸ್ಯರೊಬ್ಬರ ಕುಟುಂಬದವರು ತಾವು ಮನೆಯಲ್ಲಿ ಸಾಕಿದ ಶ್ವಾನಕ್ಕೂ ಬರ್ತ್​ಡೇ ಆಚರಣೆ ಮಾಡಿ ಸಂಭ್ರಮಿಸಿದರು.

ಶ್ವಾನಕ್ಕೆ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ

ಪಟ್ಟಣದ ವಿದ್ಯಾನಗರ ನಿವಾಸಿ ಶುಭಂ ಜ್ಯುವೆಲ್ಲರಿ ಮಾಲೀಕ ವಿಜಯಕುಮಾರ್ ಬಡಿಗೇರ ಹಾಗೂ ಪುರಸಭೆ ಸದಸ್ಯೆ ಸಹನಾ ಬಡಿಗೇರ ಅವರೇ ತಮ್ಮ ಮನೆಯಲ್ಲಿ ಸಾಕಿರುವ 'ಟಫಿ' ಹೆಸರಿನ ಶ್ವಾನಕ್ಕೆ ಮೊದಲನೇ ವರ್ಷದ ಬರ್ತ್​ಡೇಯನ್ನು ಕೇಕ್ ಕತ್ತರಿಸಿ ಆಚಸರಿಸಿದರು. ಮನೆಯ ಸದಸ್ಯನಂತಿರುವ ಶ್ವಾನದ ಹುಟ್ಟುಹಬ್ಬ ಆಚರಣೆಗೆ ಬಂದವರಿಗೆ ಇಡ್ಲಿ, ಸಾಂಬರ್, ಜ್ಯೂಸ್ ವಿತರಿಸಿದರು.

ಲಾಕ್​ಡೌನ್ ಅವಧಿಯಲ್ಲಿ ಹೊರಹೋಗುವಂತಿಲ್ಲ. ಮಕ್ಕಳು ಮನೆಯಲ್ಲಿ ಇದ್ದು ಬೇಸರವಾಗುತ್ತಿದೆ ಎಂದಾಗ ಹೊಳೆದಿದ್ದೇ ನಮ್ಮ ಶ್ವಾನ. ಅದನ್ನು ನಾವು ತಂದು ವರ್ಷ ಕಳೆದಿತ್ತು. ಹೀಗಾಗಿ ಎಲ್ಲರೂ ಸೇರಿ ಬರ್ತ್​ಡೇ ಸೆಲೆಬ್ರೇಟ್ ಮಾಡಿದೆವು ಎಂದು ಸಹನಾ ಬಡಿಗೇರ ಹೇಳಿದರು.

ಇದನ್ನೂ ಓದಿ: ಕುಕ್ಕರ್​​ ಮೂಲಕ ಸ್ಟ್ರೀಮಿಂಗ್​ ವ್ಯವಸ್ಥೆ... ಗ್ರಾಮದಲ್ಲಿ ಕಡಿಮೆಯಾಯ್ತು ಕೊರೊನಾ ಪಾಸಿಟಿವ್ ಕೇಸ್​!

ABOUT THE AUTHOR

...view details