ವಿಜಯಪುರ : ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ದಾಟುತ್ತಿದ್ದ ಬೈಕ್ ಸವಾರ ನೀರು ಪಾಲಾದ ಘಟನೆ ನಡೆದಿದೆ.
ತುಂಬಾ ಸೆಳವು ಇದ್ರೂ ಸೇತುವೆ ದಾಟಲು ಹೋದ ಬೈಕ್ ಸವಾರ ನಾಪತ್ತೆ.. - ವಿಜಯಪುರ ಜಿಲ್ಲಾ ಸುದ್ದಿ
ಬೈಕ್ ಸಮೇತ ಹಳ್ಳದಲ್ಲಿ ಸವಾರ ಕೊಚ್ಚಿ ಹೋಗಿದ್ದು, ಆತನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಂಬಿ ಹರಿಯುತ್ತಿದ್ದ ಸೇತುವೆ ದಾಟುತ್ತಿದ್ದ ಬೈಕ್ ಸವಾರ ನೀರು ಪಾಲು
ವಿಜಯಪುರ ತಾಲೂಕಿನ ದ್ಯಾಬೇರಿ ಜಂಬಗಿ ಮಧ್ಯೆದ ರಸ್ತೆಯಲ್ಲಿನ ಹಳ್ಳದ ಸೇತುವೆ ಬಳಿ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬೈಕ್ ಸಮೇತ ಹಳ್ಳದಲ್ಲಿ ಸವಾರ ಕೊಚ್ಚಿ ಹೋಗಿದ್ದು, ಆತನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.