ಕರ್ನಾಟಕ

karnataka

ETV Bharat / state

ವಿಜಯಪುರ: ನಾಯಿಯ ಪ್ರಾಣ ಉಳಿಸಲು ಹೋಗಿ ಕೆಳಗೆ ಬಿದ್ದು ಬೈಕ್​ ಸವಾರ ಸಾವು

ತರಕಾರಿ ಮಾರಲು ಬಂದಿದ್ದ ವ್ಯಕ್ತಿಯೋರ್ವ ಬೈಕ್ ಮೇಲೆ ಹೋಗುವಾಗ ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋಗಿ ಬೈಕ್​ನಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಆಲಮಟ್ಟಿ-ನಿಡಗುಂದಿ ರಸ್ತೆಯ ಚಿಮ್ಮಲಗಿ ಮಠದ ಸಮೀಪ ನಡೆದಿದೆ.

bike-accident-in-vijayapura-nidagundi-road
ನಿಡಗುಂದಿ ಬೈಕ್​ ಅಪಘಾತ

By

Published : Apr 20, 2020, 10:16 AM IST

ವಿಜಯಪುರ: ಬೈಕ್​ಗೆ ಅಡ್ಡ ಬಂದ ನಾಯಿಯ ಪ್ರಾಣ ರಕ್ಷಿಸಲು ಹೋಗಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆಲಮಟ್ಟಿ-ನಿಡಗುಂದಿ ರಸ್ತೆಯ ಚಿಮ್ಮಲಗಿ ಮಠದ ಸಮೀಪ ನಡೆದಿದೆ.

ಕೋಲಾರ ತಾಲೂಕಿನ ಕವಲಗಿ ಗ್ರಾಮದ ಶಿವಶರಣ ಗುರುಲಿಂಗಪ್ಪ ಬಿರಾದಾರ (25) ಮೃತ ಯುವಕ. ಲಾಕ್ ಡೌನ್ ಇರುವ ಕಾರಣ ಕವಲಗಿ ಗ್ರಾಮದಿಂದ ನಿತ್ಯ ತರಕಾರಿ ತೆಗೆದುಕೊಂಡು ಬಂದು ನಿಡಗುಂದಿ, ಆಲಮಟ್ಟಿ ಸುತ್ತ ಮಾರಾಟ ಮಾಡುತ್ತಿದ್ದ.

ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ನಾಯಿ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಬೈಕ್ ನಿಂದ ಕೆಳಗೆ ಬಿದ್ದಾಗ ತೆಲೆಗೆ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ನಿಡಗುಂದಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details