ವಿಜಯಪುರ:ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸಿಲ್ಲ. ಪ್ರಭಾವಿ ವ್ಯಕ್ತಿ ಎನ್ನುವ ಕಾರಣಕ್ಕೆ ಪೊಲೀಸರು ಬಂಧಿಸಿಲ್ಲವೇ? ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಟೀಕಿಸಿದರು.
ಒಂದುವೇಳೆ ಸಾಮಾನ್ಯ ವ್ಯಕ್ತಿಯಾಗಿದ್ದರೆ ಇಷ್ಟರೊಳಗೆ ಜೈಲು ಸೇರುತ್ತಿದ್ದರು. ಈಶ್ವರಪ್ಪ ಪ್ರಭಾವಿ ಇರುವ ಕಾರಣ ಇನ್ನೂ ಹೊರಗಿದ್ದಾರೆ. ಅವರ ಮೇಲೆ ದಾಖಲಾಗಿರುವ ಪ್ರಕರಣಕ್ಕೆ 10 ವರ್ಷ ಜೈಲು ಶಿಕ್ಷೆ ಇದೆ. ಅಲ್ಲದೇ ಜಾಮೀನು ಸಹ ಸಿಗುವುದಿಲ್ಲ ಎಂದರು.