ವಿಜಯಪುರ: ಚಿನ್ನದ ವ್ಯಾಪಾರಿಯಿಂದ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನನನ್ನು ಚಡಚಣ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಬಂಧನ - ಬಾಗಪ್ಪ ಹರಿಜನ ಸುದ್ದಿ,
ಭೀಮಾ ತೀರದ ಹಂತಕ ಬಾಗಪ್ಪ ಹರಿಜನನನ್ನು ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.
![ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಬಂಧನ Bhagappa harijan arrest, Bhagappa harijan arrest in Vijayapur, bheema theerada hanthaka arrest, Bhagappa harijan arrest news, Bhagappa harijan news, Bhagappa harijan latest news, ಬಾಗಪ್ಪ ಹರಿಜನ ಬಂಧನ, ವಿಜಯಪುರದಲ್ಲಿ ಬಾಗಪ್ಪ ಹರಿಜನ ಬಂಧನ, ಬಾಗಪ್ಪ ಹರಿಜನ ಬಂಧನ ಸುದ್ದಿ, ಬಾಗಪ್ಪ ಹರಿಜನ ಸುದ್ದಿ, ಭೀಮಾತೀರದ ಹಂತಕ ಬಂಧನ,](https://etvbharatimages.akamaized.net/etvbharat/prod-images/768-512-8512031-101-8512031-1598062631455.jpg)
ಲಕ್ಷ್ಮೀಕಾಂತ್ ಪಾಟೀಲ, ಬಾಗಪ್ಪ ಹರಿಜನ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ಎಂಬುವವರು ತನಗೆ ಬೆದರಿಸಿ 5 ಕೋಟಿ ರೂ. ಹಣ ಇಲ್ಲವೇ 3 ಕೆಜಿ ಚಿನ್ನ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಎಂಬುವರು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮಹಾದೇವ ಭೈರಗೊಂಡನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಂತರ ಆತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎರಡನೇ ಆರೋಪಿ ಬಾಗಪ್ಪ ಹರಿಜನ ತಲೆಮರೆಸಿಕೊಂಡಿದ್ದ. ತಡರಾತ್ರಿ ಬಾಗಪ್ಪ ಹರಿಜನನನ್ನು ಬಂಧಿಸಿರುವ ಚಡಚಣ ಪೊಲೀಸರು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ಶ್ರೀಮಂತ ಪಾಟೀಲ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.