ಕರ್ನಾಟಕ

karnataka

ETV Bharat / state

ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ.. - vijayapura news

ಇಂದು ಬೆಳಗಾವಿ ವಿಭಾಗ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ‌ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು. ಈ ಪಂದ್ಯಾವಳಿಯಲ್ಲಿ ಸುಮಾರು 9 ಜಿಲ್ಲೆಗಳ ಶಾಲಾ ಮಕ್ಕಳು ಭಾಗವಹಿಸಿದ್ದಾರೆ.

kabaddi tournament

By

Published : Oct 13, 2019, 3:45 PM IST

ವಿಜಯಪುರ :ಬೆಳಗಾವಿ ವಿಭಾಗ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ‌ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ‌ ನೀಡಲಾಯಿತು‌.

ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ..

ನಗರದಲ್ಲಿರುವ ಡಾ‌. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ‌ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದು, ಸುಮಾರು 9 ಜಿಲ್ಲೆಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಬಡ್ಡಿ ತಂಡಗಳು ಭಾಗವಹಿಸಿವೆ. ನಾಲ್ಕು ಮ್ಯಾಟ್‌ಗಳ ಮೇಲೆ ಕಬಡ್ಡಿ ಪಂದ್ಯಾವಳಿಗಳನ್ನು ಆಡಿಸಲಾಗುತ್ತಿದೆ‌. ವಿಜಯಪುರ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಈ ಪಂದ್ಯಾವಳಿಗಳ ಉಸ್ತುವಾರಿ ವಹಿಸಿಕೊಂಡಿದ್ದು, ಸಂಜೆವರೆಗೂ ಪಂದ್ಯಗಳು ನಡೆಯಲಿವೆ.

ABOUT THE AUTHOR

...view details