ಕರ್ನಾಟಕ

karnataka

ETV Bharat / state

ಬೀರಸಿದ್ದೇಶ್ವರ, ಪರಮಾನಂದ ದೇವರ ಜಾತ್ರಾ ಮಹೋತ್ಸವ: ಭಂಡಾರ ಎರಚಿ ಭಕ್ತಿಯ ಪರಾಕಾಷ್ಠೆ - ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವ

ಬೀರಸಿದ್ದೇಶ್ವರ ಜಾತ್ರೆ ಹಾಗೂ ಪರಮಾನಂದ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

Beerasiddeswar Jatra celebration at Vijaypur
ಬೀರಸಿದ್ದೇಶ್ವರ, ಪರಮಾನಂದ ದೇವರ ಜಾತ್ರಾ ಮಹೋತ್ಸವ

By

Published : Oct 26, 2022, 5:39 PM IST

ವಿಜಯಪುರ:ಜಿಲ್ಲೆಯ ನಾಗಠಾಣ ತಾಲೂಕಿನ ಬೀರಸಿದ್ದೇಶ್ವರ ಹಾಗೂ ಪರಮಾನಂದ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ‌ ನೇರವೇರಿತು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಭಂಡಾರದಲ್ಲಿ ಮಿಂದೆದ್ದರು. ದೇವರಿಗೆ ಭಂಡಾರ ಎರಚುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಇಂದು ಪರಮಾನಂದ ದೇವರ ಪ್ರತಿಷ್ಠಾಪನೆ ಹಿನ್ನೆಲೆ ಹಳ್ಳಕ್ಕೆ ದೇವರ ಮೂರ್ತಿ ತೆಗೆದುಕೊಂಡು ಹೋಗಿ ಗಂಧ ಸಿತಾರ ಮಾಡಿಕೊಂಡು ಬಂದು ಬಳಿಕ ಭಂಡಾರ ಎರಚಿ ಸಂಭ್ರಮದಿಂದ ಎರಡು ಜಾತ್ರಾ ಮಹೋತ್ಸವ ಆಚರಿಸಲಾಯಿತು.

ಬೀರಸಿದ್ದೇಶ್ವರ, ಪರಮಾನಂದ ದೇವರ ಜಾತ್ರಾ ಮಹೋತ್ಸವ

ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾರ ಎತ್ತುವ ಸ್ಪರ್ಧೆಯಲ್ಲಿ ಆಸಂಗಿ ಗ್ರಾಮದ ಅಫಜಲ್ ಖಾನ್ ಮುಜಾವರ ಅವರು ಒಂದೇ ಕೈಯಿಂದ 99 ಕೆ. ಜಿ ಭಾರದ ಕಲ್ಲನ್ನು ಎತ್ತುವ ಮೂಲಕ ನೆರೆದಿದ್ದ ಭಕ್ತರ ಗಮನ ಸೆಳೆದರು.

ಇದನ್ನೂ ಓದಿ:ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರೆ.. ಹಾಲರವಿ ಉತ್ಸವದಲ್ಲಿ ಜನಸಾಗರ

ABOUT THE AUTHOR

...view details