ಕರ್ನಾಟಕ

karnataka

ETV Bharat / state

ಸೀಲ್​​ಡೌನ್​​ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸಿದ ಪೊಲೀಸರು - Baskey sentenced to youth

ವಿಜಯಪುರ ಸ್ಟೇಷನ್ ರಸ್ತೆಯ ಬಡೆ ಕಮಾನ್ ಹತ್ತಿರ ಎಟಿಎಂಗೆ ಹೋಗುವ ನೆಪದಲ್ಲಿ ಮೂರು ಜನ ಯುವಕರು ಸೀಲ್ ಆಗಿರುವ ಪ್ರದೇಶದಲ್ಲಿ ಓಡಾಡುತ್ತಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸಿದ್ದಾರೆ.

Baskey
ಯುವಕರಿಗೆ ಬಸ್ಕಿ ಶಿಕ್ಷೆ

By

Published : Apr 15, 2020, 8:12 AM IST

ವಿಜಯಪುರ: ಕೊರೊನಾ ಆತಂಕದ ನಡುವೆಯೂ ಸೀಲ್ ಡೌನ್ ಪ್ರದೇಶದಲ್ಲಿ ಓಡಾತ್ತಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಸ್ಟೇಷನ್ ರಸ್ತೆಯ ಬಡೆ ಕಮಾನ್ ಹತ್ತಿರ ಎಟಿಎಂಗೆ ಹೋಗುವ ನೆಪದಲ್ಲಿ ಮೂರು ಜನ ಯುವಕರು ಸೀಲ್ ಆಗಿರುವ ಪ್ರದೇಶದಲ್ಲಿ ಓಡಾಡುತ್ತಿದ್ದರು. ಯುವಕರನ್ನು ಸ್ಥಳದಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಒಂದು ಎಟಿಎಂ ಕಾರ್ಡ್ ತಗೆದುಕೊಂಡು ಮೂರು ಜನ ಯುವಕರು ಹೋಗುತ್ತಿರುವುದು ಎಂದು ಹೇಳಿದ್ದಾರೆ. ನಗರದಲ್ಲಿ 7 ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಸ್ಟೇಷನ್ ರಸ್ತೆಯ ಬಡೆ ಕಮಾನ್ ಬಡಾವಣೆ ಸೀಲ್ ಡೌನ್ ಮಾಡಿದ್ದರೂ ಕೂಡ ಯುವಕರು ಅನವಶ್ಯಕವಾಗಿ ಓಡಾಟ ನಡೆಸುತ್ತಿದ್ದರು.

ಇನ್ನು ಪೊಲೀಸರು ಯುವಕರನ್ನು ವಿಚಾರಣೆ ನಡೆಸಿದಾಗ ಅನಗತ್ಯವಾಗಿ ಓಡಾಟ ನಡೆಸುತ್ತಿರುವುದು ಕಂಡು ಬಂದ ಕಾರಣ ಮೂವರು ಯುವಕರನ್ನು ರಸ್ತೆಯಲ್ಲಿ ನಿಲ್ಲಿಸಿ ಬಸ್ಕಿ ಹೊಡಸಿದ್ದಾರೆ.

ABOUT THE AUTHOR

...view details