ಕರ್ನಾಟಕ

karnataka

ETV Bharat / state

ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹಾಕುತ್ತೇವೆ: ಸಿಎಂ ಬೊಮ್ಮಾಯಿ

ಕಾರ್ಕಳದಿಂದ ಸುನಿಲ್​ ಕುಮಾರ್​ ಅವರು ಮೂರು ಬಾರಿ ಗೆದ್ದು ಬಂದಿದ್ದಾರೆ ಎನ್ನುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್​ಗೆ ಸ್ಥಾನ ಬಿಟ್ಟುಕೊಡುವುದಿಲ್ಲ ಎಂಬುದನ್ನು ಸಿಎಂ ಬೊಮ್ಮಾಯಿ ಹೇಳಿದರು.

basavaraj-bommai-reaction-about-karkala-candidate
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Feb 4, 2023, 5:44 PM IST

ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಹಾಕುತ್ತೇವೆ - ಬೊಮ್ಮಾಯಿ ಸ್ಪಷ್ಟನೆ

ವಿಜಯಪುರ: ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದಂತೆ ಶ್ರೀರಾಮಸೇನೆ ಮಾಡಿದ ಒತ್ತಾಯಕ್ಕೆ ಸೊಪ್ಪು ಹಾಕದ ಸಿಎಂ ಬಸವರಾಜ್ ಬೊಮ್ಮಾಯಿ, ಕಾರ್ಕಳದಲ್ಲಿ ಸಚಿವ ಸುನಿಲ್ ಕುಮಾರ್ ಇದ್ದಾರೆ ಎಂದು ಹೇಳುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಸ್ಪರ್ಧೆ ಮಾಡಲಿ ನಮ್ಮ ಅಭ್ಯರ್ಥಿ ಕಣಕ್ಕೆ ಇಳಿಸುವುದಾಗಿ ಸ್ಪಷ್ಟ ಸಂದೇಶ ನೀಡಿದ್ದಾರೆ.‌ ಹಾಗೇ 224 ಕ್ಷೇತ್ರದ ಸ್ಪರ್ಧೆಯ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ವಿಜಯಪುರದಲ್ಲಿ ಆರಂಭವಾದ ಎರಡು ದಿನಗಳ 37ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾತನಾಡಿದ ಅವರು.‌ ಸುನಿಲ್ ಕುಮಾರ್ ಮೂರು ಸಲ ಗೆದ್ದು ಮಂತ್ರಿ ಆಗಿದ್ದಾರೆ. ಅವರು ಆ ಕ್ಷೇತ್ರದಲ್ಲಿ ಪ್ರಭಾವಿ ಆಗಿದ್ದಾರೆ. ಕಾರ್ಕಳ ಅವರ ಕ್ಷೇತ್ರವಾಗಿದೆ. ಮುತಾಲಿಕ್​ ಅವರು ಮನವಿ ಮಾಡಲಿ, ನಮ್ಮದು ರಾಷ್ಟ್ರೀಯ ಪಕ್ಷ 224 ಕ್ಷೇತ್ರಗಳಲ್ಲಿ ನಮ್ಮದೇ ಅಭ್ಯರ್ಥಿ ಹಾಕುತ್ತೇವೆ ಎಂದರು.

ಅವರ ಶಾಸಕರನ್ನು ಭ್ರದ ಪಡಿಸಿಕೊಳ್ಳಲಿ:ಬಿಜೆಪಿ ಶಾಸಕರು ಕಾಂಗ್ರೆಸ್ ಬರ್ತಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಗಟ್ಟಿಯಾಗಿ ಇಟ್ಟು ಕೊಳ್ಳಲಿ, ಅವರಂತೆ ನಾನು ಏನೇನೋ ಮಾತನಾಡಲ್ಲ, ಅವರು ಹೋದಲ್ಲೆಲ್ಲ ಇರುವ ಕಾಂಗ್ರೆಸ್ ಶಾಸಕರನ್ನು ಗಟ್ಟಿಯಾಗಿ ಇಟ್ಟುಕೊಳ್ಳಲಿ ಎಂದರು.

ಸಾಲ ಆರೋಪಕ್ಕೆ ಪ್ರತಿಕ್ರಿಯೆ:ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ ಎಂದು ವಿರೋಧ ಪಕ್ಷದವರು ಮಾಡುತ್ತಿರುವ ಆರೋಪಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಕೋವಿಡ್​ ಕಾಲ ಬಿಟ್ಟರೆ ಅತೀ ಹೆಚ್ಚು ಸಾಲ ಮಾಡಿದ್ದು, ಸಿದ್ದರಾಮಯ್ಯ ಅವರ ಸರ್ಕಾರ. ಕರ್ನಾಟಕ ಸರ್ಕಾರದಲ್ಲೇ ಅತೀ ಹೆಚ್ಚು ಸಾಲ ಎತ್ತಿದ ಅವಧಿ ಸಿದ್ದರಾಮಯ್ಯ ಅವರದ್ದು, ಇದು ಇತಿಹಾಸ. ನಾವು ಅದಕ್ಕೆ ಸರಿಯಾದ ಉತ್ತರವನ್ನು ಬಜೆಟ್​ ಅಧಿವೇಶನದಲ್ಲಿ ಕೊಡುತ್ತೇವೆ. ಅಲ್ಲಿ ಅಂಕಿ - ಅಂಶಗಳ ಸಹಿತ ಚರ್ಚೆ ಮಾಡೋಣ ಎಂದರು.

ಅವರ ಆಂತರಿಕ ವಿಚಾರಕ್ಕೆ ಉತ್ತರಿಸಲ್ಲ:ವಿರೋಧ ಪಕ್ಷ ಕಾಂಗ್ರೆಸ್​ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್​ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ನೀಡುತ್ತಿರುವ ಭರವಸೆಗಳ ಬಗ್ಗೆ ಅಸಮಾಧಾನಗೊಂಡಿರುವ ಬಗ್ಗೆ ಉತ್ತರಿಸಿ, ಇದು ಅವರ ಆಂತರಿಕ ವಿಚಾರವಾಗಿದೆ. ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಪರಮೇಶ್ವರ ಬಹಳ ಬುದ್ದಿವಂತರು ಎಲ್ಲವನ್ನು ಕೂಡ ಅರ್ಥ ಮಾಡಿಕೊಂಡವರು. ಅವರು ಈ ರೀತಿ ವ್ಯಕ್ತಪಡಿಸಿದ್ದಾರೆ ಅಂದರೆ ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಕಾಂಗ್ರೆಸ್‌‌ ನಾಯಕರಿಗೆ ಚಾಟಿ ಬೀಸಿದರು.‌ ಅವರಲ್ಲಿ ಏನೂ ಸರಿ ಇದೆ, ಏನು ಸರಿಯಿಲ್ಲ ಅಂತ ಹೇಳಲು ಆಗದು ಎಂದರ.

ಸಿಡಿ ವಿಚಾರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿಡಿ ವಿಚಾರಕ್ಕೆ ಅಮಿತ್ ಶಾ ಭೇಟಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು.

ಇದನ್ನೂ ಓದಿ:ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ

ABOUT THE AUTHOR

...view details