ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದ ಭಂಡಾರದೊಡೆಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ನೆರೆಯ ಮಹಾರಾಷ್ಟ್ರ ಹಾಗೂ ಇತರ ಜಿಲ್ಲೆಯ ಪೈಲ್ವಾನ್ಗಳು ಭಾಗವಹಿಸಿ ತಮ್ಮ ಕಸರತ್ತು ಪ್ರದರ್ಶಿಸಿದರು.
ವಿಜಯಪುರ: 32 ಕೆಜಿ ಸಂಗ್ರಾಣಿ ಕಲ್ಲು ಎತ್ತಿ ಹುಬ್ಬೇರಿಸಿದ 11ರ ಬಾಲಕ - ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ
ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ. ಗಮನ ಸೆಳೆದ ಭಾರ ಎತ್ತುವ ಸ್ಪರ್ಧೆ. ಮಹಾರಾಷ್ಟ್ರ ಹಾಗೂ ಇತರ ಜಿಲ್ಲೆಯ ಪೈಲ್ವಾನ್ಗಳು ಭಾಗಿ.
ಭಾರ ಎತ್ತುವ ಸ್ಪರ್ಧೆ
5ನೇ ತರಗತಿ ಓದುತ್ತಿರುವ ತಾಳಿಕೋಟೆಯ 11 ವರ್ಷದ ಬಾಲಕ ಉಸ್ಮಾನಗಣಿ 32 ಕೆಜಿ ಭಾರದ ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ. ಹಲವು ಯುವ ಪೈಲ್ವಾನ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು.
ಇದನ್ನೂ ಓದಿ:ಬಸವೇಶ್ವರ ಜಾತ್ರೆಗಾಗಿ ಮಹಿಳೆಯರಿಂದ ತಿರಂಗಾದೊಂದಿಗೆ ರೊಟ್ಟಿ ಮೆರವಣಿಗೆ