ವಿಜಯಪುರ:ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಹಿನ್ನೆಲೆ, ಎಲ್ಲ ಕೋಮಿನ ಮುಖಂಡರ ಜೊತೆ ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ಶಾಂತಿಸಭೆ ನಡೆಸಿದರು.
ವಿವಿಧ ಕೋಮಿನ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದ ಬಸವನ ಬಾಗೇವಾಡಿ ಪೊಲೀಸರು - Vijayapura News
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಹಿನ್ನೆಲೆ, ಬಸವನ ಬಾಗೇವಾಡಿ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ ಹೆರಕಲ್ ನೇತೃತ್ವದಲ್ಲಿ ಎಲ್ಲ ಕೋಮಿನ ಮುಖಂಡರ ಜೊತೆ ಶಾಂತಿಸಭೆ ನಡೆಸಲಾಯಿತು.
ವಿವಿಧ ಕೋಮಿನ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದ ಬಸವನ ಬಾಗೇವಾಡಿ ಪೊಲೀಸರು
ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಶಾಂತಿಸಭೆ ಮುಂದಾಗಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ ಹೆರಕಲ್ ನೇತೃತ್ವದಲ್ಲಿ ಸಭೆ ನಡೆಸಿ, ಯಾರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕೋಮಿಗೆ ಧಕ್ಕೆ ತರುವ ಪೋಸ್ಟ್ ಹರಿಬಿಡಬಾರದು. ಎಲ್ಲರೂ ಒಗ್ಗಟಾಗಿ ಇರಬೇಕು. ಬೆಂಗಳೂರಿನಲ್ಲಿ ನಡೆದ ಗಲಭೆ ವಿಚಾರವಾಗಿ ಸಾರ್ವಜನಿಕ ಪ್ರಚೋದನಕಾರಿ ಹೇಳಿಕೆ ಅಥವಾ ಪೋಸ್ಟ್ ಮಾಡಬಾರದು ಎಂದರು.
ಇನ್ನು, ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಯಾರೂ ಕೂಡ ಅನುಚಿತವಾಗಿ ವರ್ತಿಸಬಾರದು ಎಂದರು.