ವಿಜಯಪುರ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆಗೆ ಗಡುವು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಸವ ಜಯ ಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಮೂರು ಬಾರಿ ಗಡುವು ಕೊಟ್ಟಿದ್ವಿ. ಸರ್ಕಾರ ಮೂಗಿಗೆ ತುಪ್ಪ ಹಚ್ಚುತ್ತೇ ಅನ್ನಬಾರದು ಅಂತ ದಿಢೀರ್ ಸತ್ಯಾಗ್ರಹ ಆರಂಭಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದರು.
ಗಡುವು ಕೊಟ್ಟಿದ್ದು ಮುಗಿದ ಅಧ್ಯಾಯವಾಗಿದೆ. ಇನ್ನೇನಿದ್ದರೂ ಮೀಸಲಾತಿ ಆದೇಶ ಪ್ರತಿ ಸಿಗುವವರೆಗೂ ಹೋರಾಟ ನಡೆಸಲಾಗುವುದು. ಕೂಡಲಸಂಗಮದಲ್ಲಿ 14ದಿನ ವನವಾಸ ಮಾಡಿ, ಮಾನಸಿಕ ಸಂಕಲ್ಪ ಮಾಡಿದ್ದೇವೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಮೀಸಲಾತಿ ಸಿಗದಿದ್ದರೆ ಸಿಎಂ ಮನೆ ಎದುರು ಧರಣಿ ಸಹ ನಡೆಸಲಾಗುವುದು. ಅಲ್ಲಿಗೂ ಆಗದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸತ್ಯಾಗ್ರಹ ನಡೆಸಲಾಗುವುದು, ಕೊನೆಗೆ ಅದಕ್ಕೂ ಮಣಿಯದಿದ್ದರೂ 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೇವೆ ಎಂದರು.