ವಿಜಯಪುರ :ಅನಂತ ಕುಮಾರ್ ಅವರ ಜಾಗದಲ್ಲಿ ಪ್ರಹ್ಲಾದ್ ಜೋಶಿಯವರು ಇದ್ದಾರೆ, ಅವರಿಗೆ ಇವತ್ತು ತುಂಬಾ ಜವಾಬ್ದಾರಿ ಇದೆ. ಅಲ್ಲದೇ ಅವರು ಉತ್ತರ ಕರ್ನಾಟಕದವರಾಗಿದ್ದಾರೆ. ಹಾಗೆಯೇ ಅವರೊಂದಿಗೆ ಜಗದೀಶ ಶೆಟ್ಟರ್ ಕೂಡಾ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರಿಬ್ಬರೂ ನೇತೃತ್ವ ವಹಿಸಿದರೆ ನಾವು ಹಿಂಬಾಲಿಸುತ್ತೇವೆ ಎಂದು ನೆರೆ ಪರಿಹಾರದ ವಿಚಾರವಾಗಿ ಕೇಳಿದ ಪ್ರಶ್ನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದ್ದಾರೆ.
ಜೋಶಿ, ಶೆಟ್ಟರ್ ನೆರೆ ಪರಿಹಾರದ ಜವಾಬ್ದಾರಿ ತೆಗೆದುಕೊಳ್ಳಲಿ: ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್
ನೆರೆ ಪರಿಹಾರದ ವಿಚಾರವಾಗಿ ಕೇಳಿದ ಪ್ರಶ್ನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗು ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ, ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ಪರಿಹಾರ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪ್ರಧಾನಿಯನ್ನು ಭೇಟಿಯಾಗುತ್ತಾನೆ. ವಿಜಯಪುರದ ಶಾಸಕನಾಗಿ, ಉತ್ತರ ಕನ್ನಡ ಜನರ ಭಾವನೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಪತ್ರವನ್ನು ಇಂದೇ ಬರೆಯುತ್ತೇನೆ. ಆಸಕ್ತಿ ಇರುವವರು ಬರಬಹುದು ಎಂದರು.